Kannada NewsLatest

ಚೆಕ್ ಪೋಸ್ಟ್ ತಪ್ಪಿಸಿ ಕರ್ನಾಟಕದೊಳಗೆ ಪ್ರವೇಶಿಸಲು ಯತ್ನ : 2 ಬಸ್ಸುಗಳು ಪೊಲೀಸರ ವಶಕ್ಕೆ  

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ಮುಂಬೈನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್‌ಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಇಲ್ಲದ ಪ್ರಯಾಣಿಕರಿದ್ದ ಕಾರಣ ಕಳ್ಳದಾರಿಯಲ್ಲಿ ಕರ್ನಾಟಕದ ಗಡಿಯಲ್ಲಿ ನುಸುಳಲು ಯತ್ನಿಸಿದ್ದ ಎರಡು ಖಾಸಗಿ ಬಸ್‌ಗಳನ್ನು ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ.

ಮಹಾರಾಷ್ಟ್ರದಿಂದ ಕರ್ನಾಟಕದೊಳಗೆ ಪ್ರವೇಶಿಸುವ ಪ್ರತಿ ವ್ಯಕ್ತಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಆದರೆ ಮಂಗಳವಾರ ಬೆಳಗ್ಗೆ ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಎರಡು ಬಸ್‌ಗಳು ನಿಪ್ಪಾಣಿ ಬಳಿಯ ಕೋಗನೋಳಿ ಚೆಕ್ ಪೋಸ್ಟ್ ತಪ್ಪಿಸಿ ಕಳ್ಳ ದಾರಿಯಿಂದ ಕರ್ನಾಟಕ ಗಡಿಯೊಳಗೆ ಪ್ರವೇಶಿಸಲು ಯತ್ನಿಸಿದ್ದವು. ಈ ಎರಡೂ ಬಸ್‌ಗಳನ್ನು ಹಿಡಿದ ನಿಪ್ಪಾಣಿ ಠಾಣೆಯ ಪೊಲೀಸರು ಸಾಂಕ್ರಾಮಿಕ ರೋಗ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.

ಕೋವಿಡ್ ನೆಗೆಟಿವ್ ವರದಿ ಇಲ್ಲದ ೪೧ ಪ್ರಯಾಣಿಕರು

ಶರ್ಮಾ ಟ್ರಾನ್ಸ್?ಪೋರ್ಟ್‌ಗೆ ಸೇರಿದ ಬಸ್‌ನಲ್ಲಿ (KA- 51 AD 0277) ೨೮ ಪ್ರಯಾಣಿಕರಿದ್ದರು. ಅವರಲ್ಲಿ ೨೪ ಮಂದಿ ಬಳಿ ಆರ್‌ಟಿಪಿಸಿಆರ್ ಕೋವಿಡ್ ನೆಗೆಟಿವ್ ವರದಿ ಇರಲಿಲ್ಲ. ನ್ಯಾಷನಲ್ ಟ್ರಾವೆಲ್ಸ್‌ಗೆ ಸೇರಿದ ಮತ್ತೊಂದು ಬಸ್‌ನಲ್ಲಿ (KA-51 AF 6652) ೨೮ ಪ್ರಯಾಣಿಕರ ಪೈಕಿ ೧೭ ಮಂದಿ ಬಳಿ ಆರ್‌ಟಿಪಿಸಿಆರ್ ಕೋವಿಡ್ ನೆಗೆಟಿವ್ ವರದಿ ಇರಲಿಲ್ಲ. ಈ ಬಸ್ಗಳು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಯಿಂದ ಬಚಾವಾಗಲು ಕಾಗಲ್, ಶೇಂಡೂರ್, ಮಾಖ್ವೆ ಹಾಗೂ ಅಪ್ಪಾಚಿವಾಡಿ ಮಾರ್ಗದಲ್ಲಿ ಸಂಚರಿಸಿ ಪುಣೆಬೆಂಗಳೂರು ಹೆದ್ದಾರಿ ಸೇರಿಕೊಳ್ಳುವ ಪ್ರಯತ್ನದಲ್ಲಿದ್ದರು. ಬಸ್‌ನ ವ್ಯವಸ್ಥಾಪಕ, ಚಾಲಕರಾದ ಅಸ್ಲಂ ಉಲ್ಲಾಖಾನ್ ಮತ್ತು ಎನ್.ಉಲ್ಲಾಖಾನ್ ಹಾಗೂ ನಿರ್ವಾಹಕ ಟಿಪ್ಪುಸುಲ್ತಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಬೇರೆ ಬಸ್‌ಗಳಲ್ಲಿ ಪ್ರಯಾಣ ಮುಂದುವರಿಸಲು ಅವಕಾಶ ಕೊಡಲಾಗಿದೆ. ಉಳಿದವರನ್ನು ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದಾರೆಎಂದು ಪೊಲೀಸರು ತಿಳಿಸಿದ್ದಾರೆ.

Home add -Advt

ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ; ಪಿಎಂ ಇ-ವಿದ್ಯಾ ಡಿಜಿಟಲ್ ಯುನಿವರ್ಸಿಟಿ ಆರಂಭ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button