Kannada NewsKarnataka News

ಸಂಸ್ಕಾರ ಭಾರತಿಯಿಂದ 2 ಸ್ಪರ್ಧೆಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಂಸ್ಕಾರ ಭಾರತಿ ಜ.24ರಂದು ಐಎಂಇಆರ್ ಸಭಾಭವನದಲ್ಲಿ 2 ಸ್ಪರ್ಧೆಗಳನ್ನು ಆಯೋಜಿಸಿದೆ. ಒಂದು ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ, ಮತ್ತೊಂದು ತಿಳಗುಳ್ ಆರ್ನಮೆಂಟ್ ತಯಾರಿಕೆ ಸ್ಪರ್ಧೆ.

ದೇಶಭಕ್ತಿ ಗೀತೆ ಸ್ಪರ್ಧೆ 15 ವರ್ಷದೊಳಗಿನವರಿಗೆ ಮತ್ತು ಇತರರಿಗಾಗಿ ಪ್ರತ್ಯೇಕ ಸ್ಪರ್ಧೆ ನಡೆಯುವುದು. ಗರಿಷ್ಠ 3 ನಿಮಿಷದ ಆಡಿಯೋ, ವೀಡಿಯೋವನ್ನು ವಾಟ್ಸಪ್ ಅಥವಾ ಟೆಲಿಗ್ರಾಂ ಮೂಲಕ ಜ.20ರೊಳಗೆ 8050444693 ನಂಬರಿಗೆ ಕಳಿಸಬೇಕು. ಜ.24ರಂದು ಅಂತಿಮ ಸುತ್ತು ನಡೆಯಲಿದೆ. ಅಲ್ಲಿ ಗರಿಷ್ಠ 5 ನಿಮಿಷ ಅವಕಾಶವಿದೆ. ಎರಡೂ ಕಡೆ ಮ್ಯೂಸಿಕ್ ಆರ್ಟಿಸ್ಟ್ ಮತ್ತು ಕರೋಕೆ ಬಳಸಲು ಅವಕಾಶವಿದೆ. 50 ರೂ. ಪ್ರವೇಶ ಫೀ ನಿಗದಿಪಡಿಸಲಾಗಿದೆ.

ತಿಳಗುಳ್ ಆರ್ನಮೆಂಟ್ ತಯಾರಿಕೆ ಸ್ಪರ್ಧೆಗ 1 ಗಂಟೆ ನಿಗದಿಪಡಿಸಲಾಗಿದ್ದು, ಥೀಮ್ ನ್ನು ಸ್ಥಳದಲ್ಲೇ ಹೇಳಲಾಗುತ್ತದೆ. ಅಗತ್ಯ ಸಾಮಗ್ರಿಗಳನ್ನು ಸ್ಪರ್ಧಾಳುಗಳೇ ತರಬೇಕು. 20 ರೂ. ಪ್ರವೇಶ ಫೀ ಇದೆ.

ಜ.24ರಂದು ಸಂಜೆ 4.30ರಿಂದ ಬಹುಮಾನ ವಿತರಣೆ ನಡೆಯಲಿದೆ.

Home add -Advt

 

Related Articles

Back to top button