ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದ ರೈತರು ಹೊಲಕ್ಕೆ ಹೋಗಲು ಅನುಕೂಲ ಕಲ್ಪಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು 2 ಕೋಟಿ ರೂ. ಗಳನ್ನು ಮಂಜೂರು ಮಾಡಿಸಿ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಚಾಲನೆ ನೀಡಿದರು.
“ರೈತರು ಈ ದೇಶದ ಬೆನ್ನೆಲುಬು. ದೇಶದ ಹಿತಕ್ಕಾಗಿ ತರಕಾರಿ, ದವಸ ಧಾನ್ಯಗಳನ್ನು ಬೆಳೆಯುವುದರಲ್ಲಿ ನಿರತರಾಗಿದ್ದಾರೆ. ಹಗಲಿರುಳು ಎನ್ನದೇ ನಿಸ್ವಾರ್ಥ ಸೇವೆಯಲ್ಲಿ ನಿರತರಾಗಿರುವ ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ಅವರ ಸೇವೆಗೆ ಸದಾ ಅಣಿಯಾಗಿದ್ದೇನೆ. ರೈತರ ಸೇವೆ ಮಾಡುವ ಸದವಕಾಶ ಸಿಕ್ಕಿದ್ದು ನನ್ನ ಪುಣ್ಯ,” ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಗ್ರಾಮದ ಹಿರಿಯರು, ಬಾಹು ಶಿಂದೋಳ್ಕರ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ರಾಜು ಪಾಟೀಲ, ಶರತ್ ಪಾಟೀಲ, ಸುನೀಲ ಪಾಟೀಲ, ಶಾನೂರ ನದಾಫ್, ಮಹಮ್ಮದ್ ಮುಲ್ಲಾ, ಗಜಾನನ ಕಣಬರ್ಕರ್, ಗಜು ಪಾಟೀಲ, ಶ್ಯಾಮ್ ಮುತಗೇಕರ್, ಮಾರುತಿ ಪಾಟೀಲ, ರಾಯಣ್ಣ ಕಂಪಿ, ಪಿಂಟು ಮಲ್ಲವ್ವಗೋಳ, ವಿಶ್ವನಾಥ್ ಮಲ್ಲೂರ, ಕಿರಣ ಪಾಟೀಲ, ಪಿಂಟು ಪೂಜಾರಿ, ನಾಗೇಶ ದೇಸಾಯಿ, ರವಿ ಕೋಟಬಾಗಿ, ರುಕ್ಮಿಣಿ ಸಿಂಗಾರಿ, ಪಕ್ಷದ ಕಾರ್ಯಕರ್ತರು ಹಾಗೂ ಆಪ್ತ ಸಹಾಯಕರು ಉಪಸ್ಥಿತರಿದ್ದರು.
ಕಾಂಗ್ರೆಸ್ ನಲ್ಲಿ ಅಸ್ಪಷ್ಟತೆ; ಸತೀಶ್ ಜಾರಕಿಹೊಳಿ ವಿರುದ್ಧ ಮೊದಲು ಕ್ರಮ ಕೈಗೊಳ್ಳಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ