

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಿರಂತರ ಮಳೆಯ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಶಾಲೆ ಮತ್ತು ಪಿಯು ಕಾಲೇಜುಗಳಿಗೆ 2 ದಿನ ರಜೆ ಘೋಷಿಸಲಾಗಿದೆ.
ಖಾನಾಪುರ ತಹಸಿಲ್ದಾರರು ನೀಡಿದ ವರದಿ ಆಧರಿಸಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಖಾನಾಪೂರ ತಾಲ್ಲೂಕಿನಲ್ಲಿ ಕಳೆದ ವಾರ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅವುಗಳನ್ನು ದಾಟಿ ಮಕ್ಕಳು ಶಾಲೆಗಳಿಗೆ ಬರುವುದರಿಂದ ಮಳೆ ನೀರಿನಲ್ಲಿ ಸಿಲುಕುವ ಸಂಭವ ಇರುವುದರಿಂದ ಮತ್ತು ಕೆಲವು ಕಡೆ ಶಾಲೆಯ ಛಾವಣಿಗಳು ಸೋರುತ್ತಿರುವುದರಿಂದ ಮಕ್ಕಳಿಗೆ ಆಗುವ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ದಿನಾಂಕ:19.07.2024 ಮತ್ತು 20.07.2024 2 ದಿನಗಳ ರಜೆ ಘೋಷಿಸುವುದು ಸೂಕ್ತವೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಾನಾಪೂರ ಇವರೊಂದಿಗೆ ಚರ್ಚಿಸಿ ರಜೆ ಘೋಷಿಸಬೇಕೆಂದು ಖಾನಾಪುರ ತಹಸಿಲ್ದಾರರು ವರದಿ ನೀಡಿದ್ದರು.
ಇದನ್ನು ಆಧರಿಸಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಖಾನಾಪುರ ತಾಲೂಕಿನ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ 2 ದಿನ ರಜೆ ಘೋಷಿಸಲಾಗಿದ ಎಂದು ಮೊಹ್ಮದ್ ರೋಷನ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ