Latest

*2 ತಿಂಗಳ ಮಗುವನ್ನು ಬಾವಿಗೆ ಎಸೆದು ಕೊಲೆ*

ಪ್ರಗತಿವಾಹಿನಿ ಸುದ್ದಿ: ಇದೆಂತಹ ಅಮಾನವೀಯ ಕೃತ್ಯ. ಹಸುಗೂಸನ್ನು ಬಾವಿಗೆ ಎಸೆದು ಹತ್ಯೆ ಮಾಡಿದ್ದಾರೆ. ಮನುಷತ್ವವನ್ನೂ ಮರೆತು ದುಷ್ಟರು ಮಗುವನ್ನೇ ಕೊಲೆಗೈದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

Home add -Advt

2 ತಿಂಗಳ ಹೆಣ್ಣುಮಗುವನ್ನು ನಿರ್ಜನ ಪ್ರದೇಶದ ಬಾವಿಗೆ ಎಸೆದು ಹತ್ಯೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಅಂಬೇಡ್ಕರ್ ನಗರದ ಹೊರವಲಯದಲ್ಲಿರುವ ತೆರೆದ ಬಾವಿಗೆ ಕಂದಮ್ಮನನ್ನು ಎಸೆದು ಕೊಲೆ ಮಾಡಿದ್ದಾರೆ.

ಹೆಣ್ಣುಮಗು ಎಂಬ ಕಾರಣಕ್ಕೆ ಮಗುವನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಾಗೇಶ್ ಹಾಗೂ ಚೆಟ್ಟಮ್ಮ ದಂಪತಿಯ 2 ತಿಂಗಳ ಹಸುಗೂಸು ಮೀನಾಕ್ಷಿ ಕೊಲೆಯಾಗಿರುವ ಕಂದಮ್ಮ. ಸ್ಥಳಕ್ಕೆ ಯಾದಗಿರಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related Articles

Back to top button