Belagavi NewsBelgaum NewsKannada NewsKarnataka NewsNationalPolitics

*ಇನ್ನೆರಡು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್* 

ಪ್ರಗತಿವಾಹಿನಿ ಸುದ್ದಿ: ಇನ್ನೆರಡು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣ ಪಾವತಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದರು.

Home add -Advt

ಈ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಎರಡ್ಮೂರು ತಿಂಗಳಿನಿಂದ ಹಣ ಬಂದಿಲ್ಲ ಎಂಬ ವಿಚಾರ ಸುಳ್ಳು. ಮೇ 5ರವರೆಗೆ ಹಣ ಡಿಬಿಟಿ ಮೂಲಕ ರವಾನೆಯಾಗಿದೆ. ಇನ್ನು ಜೂನ್ ತಿಂಗಳದ್ದು ಡಿಬಿಟಿ ಎಲ್ಲ ರೆಡಿಯಾಗಿದ್ದು, ಇನ್ನೆರಡು ದಿನಗಳಲ್ಲೇ ಹಣ ಜಮೆಯಾಗಲಿದೆ ಎಂದರು.

ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ಸಿಗುವುದು ತಡವಾಗುತ್ತಿದೆ ಕಳೆದ 2-3 ತಿಂಗಳಿಂದ ಸಿಕ್ಕಿಲ್ಲ ಎಂಬ ಸುದ್ದಿ ಹುಸಿಯಾಗಿದೆ ಎಂದು ವಿವರಿಸಿದರು. ಇನ್ನು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ SC/ST ಸಮುದಾಯದ ಹಣ ಬಳಕೆಯಾಗುತ್ತಿರುವ ಆರೋಪವಗಳನ್ನು ಸಚಿವೆ ಇದೇ ವೇಳೆ ತಳ್ಳಿ ಹಾಕಿದರು.

Related Articles

Back to top button