ಪ್ರಗತಿವಾಹಿನಿ, ಬೆಳಗಾವಿ:
ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರನ್ನು ಬಂಧಿಸಲಾಗಿದೆ.
ನಿನ್ನೆ ರಾತ್ರಿ 8.30ರ ವೇಳೆಗೆ ಉದ್ಯಮಬಾಗ್ ಎಎಸ್ಐ ಎಮ್ ಬಿ ಅಡಗಲಿ ಪೊಲೀಸ್ ಸಮವಸ್ತ್ರದಲ್ಲಿ 4 ನೇ ರೆಲ್ವೆ ಗೇಟ ಹತ್ತಿರ ಸಾರ್ವಜನಿಕ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸುವ ಕರ್ತವ್ಯದಲ್ಲಿದ್ದಾಗ, ಬೈಲಹೊಂಗಲ ತಾಲೂಕು ದೇಶನೂರಿನ (ಹಾಲಿ ಖಾಸಬಾಗ ನಿವಾಸಿ) ಬಸಪ್ಪ ಭೀಮಪ್ಪ ಮುಳ್ಳಾಕ್ಷಿ ಮತ್ತು ಅಳ್ನಾವರ ಮೂಲದ (ಹಾಲಿ ಭವಾನಿ ನಗರ ನಿವಾಸಿ) ಬಸವರಾಜ ಹನುಮಂತ ಕುಂದರಗಿ ಬಂಧಿತರು.
ಇವರು ತಮ್ಮ ಬಜಾಜ ಪಲ್ಸರ್ ಮೋಟಾರ ಸೈಕಲ್ ಮೇಲಿಂದ ಬಂದು ಸಂಚಾರಿ ವ್ಯವಸ್ಥೆಗೆ ಅಡ್ಡಿ ಮಾಡಿದ್ದಲ್ಲದೇ ಸಂಚಾರ ನಿಯಂತ್ರಣದಲ್ಲಿ ತೊಡಗಿದ ಪೊಲೀಸ್ ಅಧಿಕಾರಿಗೆ ಅವಾಚ್ಯವಾಗಿ ಬೈದು, ಅವರ ಮೇಲೆ ಹಲ್ಲೆ ಮಾಡಿ, ಜೀವದ ಧಮಕಿ ಹಾಕಿ ಸಾರ್ವಜನಿಕರ ಎದುರಲ್ಲಿ ಅವರ ಸಮವಸ್ತ್ರವನ್ನು ಹಿಡಿದು ಎಳೆದಾಡಿ, ಅವರು ಧರಿಸಿದ ವಿಸಿಲ್ ಗಾರ್ಡ ಮತ್ತು ಎಡಬಾಜು ಪ್ಲಾಪನ್ನು ಹರಿದು ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆಂದು ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಬ್ಬರನ್ನೂ ಬಂಧಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ