Latest

2 ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ: 2.34 ಲಕ್ಷ ರೂ. ನಗದು, ಸಾಮಗ್ರಿ ವಶ, 13 ಜನರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-

ಬೆಳಗಾವಿಯ ಪೊಲೀಸರು 2 ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿ 13 ಜನರನ್ನು ಬಂಧಿಸಿದ್ದು, ಒಟ್ಟೂ 2.34 ಲಕ್ಷ ರೂ. ವಸ್ತು ಹಾಗೂ ನಗದನ್ನು ವಶಪಡಿಸಿಕೊಡಿದ್ದಾರೆ. 

ಬೆಳಗಾವಿ ನಗರ ಎಸಿಪಿ  ಮತ್ತು ಸಿಸಿಪಿ ಪೊಲೀಸ್ ಇನ್ಸಪೆಕ್ಟರ್ ತಂಡದಿಂದ ಈ ದಾಳಿ ನಡೆಸಿತು. 

 ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವೀನ್ಸ ಗಾರ್ಡನ್ ಹತ್ತಿರ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 1. ನೆಲ್ಸನ್ ಡಾಮ್ನಿಕ್ ಡಿಕ್ರೂಜ್ ಸಾ: ಮನಂ ೬೪ ಹೈಸ್ಟ್ರೀಟ್ ಕ್ಯಾಂಪ್ ಬೆಳಗಾವಿ 2. ಮಯೂರೇಶ ಪ್ರತಾಪ ಕಾಕತಕರ ಸಾ: ಮನಂ 690, ಸರಸ್ವತಿ ನಗರ 1 ನೇ ಕ್ರಾಸ ಗಣೇಶಪೂರ ಬೆಳಗಾವಿ 3. ಡಾಮ್ನಿಕ್ ಜಾನ್ ಡಿಕ್ರೂಜ್ ಸಾ: ಮನಂ ೬೪ ಹೈಸ್ಟ್ರೀಟ್ ಕ್ಯಾಂಪ್ ಬೆಳಗಾವಿ 4. ಜ್ಯೋತಿಬಾ ಶಿವಾಜಿ ಶಿಂಧೆ ಸಾ: ಮನಂ 4644, ಬಡಕಲ ಗಲ್ಲಿ ಬೆಳಗಾವಿ 5. ಮೋಹನ ಅಮೃತ ಜಾಧವ ಸಾ: ಮನಂ 151/2 ವಿನಾಯಕ ನಗರ ಬೆಳಗಾವಿ 6. ಅಬಿದಿನ್ ಮುಸ್ತಫಾ ಉಸ್ತಾದ ಸಾ: ಆಜಾದ ನಗರ 1 ನೇ ಕ್ರಾಸ್ ಬೆಳಗಾವಿ 7. ಫಹೀಮ್ ಶಮಶುದ್ದೀನ್ ಬೇಪಾರಿ ಸಾ: ಮನಂ ೯೩ನ್ಯೂ ಚಾಳ ಕ್ಯಾಂಪ್ ಬೆಳಗಾವಿ ಇವರು ಅಂದರ ಬಾಹರ್ ಎಂಬ ಇಸ್ಪೀಟ ಆಟ ಆಡುತ್ತಿದ್ದಾಗ ಅಪರಾಧ ವಿಭಾಗದ ಎಸಿಪಿ ಮಹಾಂತೇಶ್ವರ ಜಿದ್ದಿ ನೇತೃತ್ವದಲ್ಲಿ ಗುರುರಾಜ್ ಕಲ್ಯಾಣಶೆಟ್ಟಿ ಪಿ.ಐ ಸಿಸಿಬಿ ಘಟಕ ಮತ್ತು ಚನ್ನಕೇಶವ ಬಿ ಟಿಂಗರಿಕರ ಪಿಐ ಕ್ಯಾಂಪ ಹಾಗೂ ಸಿಸಿಬಿ ಘಟಕದ ಸಿಬ್ಬಂದಿಗಳಾದ ಐ ಎಸ್ ಪಾಟೀಲ, ಎಚ್ ಎಸ್ ನಿಸುನ್ನವರ, ಶಿವಲಿಂಗ ಪಾಟೀಲ, ಬಿ. ಆರ್. ಡೂಗ್, ಎಎಸ್‌ಐ, ಬಿ ಬಿ ಗೌಡರ ವಿ ಎಫ್ ಕಲಕಾಂಬಕರ ದಾಳಿ ಮಾಡಿ 7 ಜನ ಆರೋಪಿಗಳನ್ನು ವಶಕ್ಕೆ ಪಡೆದು  ಅವರಿಂದ 12,850 ರೂ. ಮತ್ತು 7 ಮೊಬೈಲ್ ಹಾಗೂ ೪ ದ್ವಿಚಕ್ರವಾಹನ ಸೇರಿ ಒಟ್ಟು ರೂ.2,10,810 ರೂ. ಮೌಲ್ಯದ ವಸ್ತುಗಳನ್ನು  ವಶಪಡಿಸಿಕೊಂಡರು. 

ಇನ್ನೊಂದು ಪ್ರಕರಣದಲ್ಲಿ ಅನಗೋಳ ಜಟಪಟ ಕಾಲನಿಯ  ಸಾರ್ವಜನಿಕ ಜಾಗದಲ್ಲಿ ಇಸ್ಪೀಟ್ ಜುಗಾರ ಆಟ ಆಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ  ಮಹಾಂತೇಶ್ವರ ಜಿದ್ದಿ ನೇತೃತ್ವದಲ್ಲಿ ಅವರ ಅಧೀನ ಸಿಬ್ಬಂದಿಗಳಾದ ಅನೀಲ ಎಲ್ ಪಾಟೀಲ, ಶ್ರೀಧರ ಭಜಂತ್ರಿ, , ಯಾಸೀನ ಡಿ ನಧಾಪ, ರವಿ ದುರ್ಗಿ ಇವರು ದಾಳಿ ಮಾಡಿ 1. ದಿನೇಶ ಬಲಜೋರ ಸಹಾನಿ ಸಾ; ನಂ 205, ನ್ಯೂ ಶಿವಾಜಿ ಕಾಲನಿ ಪಾಪಾಮಾಳ ಟಿಳಕವಾಡಿ ಬೆಳಗಾವಿ 2. ದರೋಗಾ ರಾಮಚಣ್ಣ ಸಹಾನಿ ಸಾ; ಜಟಪಟ ಕಾಲನಿ 1 ನೇ ಕ್ರಾಸ ಅನಗೋಳ ಬೆಳಗಾವಿ 3. ಯೋಗೇಂದ್ರ ಬುರಿಕ ಪಾಸ್ವಾನ, ಚೌಗಲೆವಾಡಿ ಟಿಳಕವಾಡಿ ಬೆಳಗಾವಿ 4. ದಿಲೀಪ ಭದ್ರಿನಾಥ ಚೌವ್ಹಾಣ ಸಾ: ಬಾಲಕೃಷ್ಣ ನಗರ ಧಾಮಣೆ ರೋಡ ವಡಗಾಂವ ಬೆಳಗಾವಿ 5. ದರೋಗಾ ರಾಮಬಚನ ಸಹಾನಿ ಸಾ: ನ್ಯೂ ಶಿವಾಜಿ ಕಾಲನಿ ಪಾಪಾಮಾಳ ಟಿಳಕವಾಡಿ ಬೆಳಗಾವಿ 6. ಮುನಸಿ ರಾಮಸಿಂಗ್ ಸಹಾನಿ, ಚೌಗಲೆವಾಡಿ ಟಿಳಕವಾಡಿ ಬೆಳಗಾವಿ ಎನ್ನುವವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ರೂ.23,800 ರೂ. ನಗದು ಹಾಗೂ ಇಸ್ಪಿಟ್ ಎಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್, ಡಿಸಿಪಿಗಳಾದ ಸೀಮಾ ಲಾಟ್ಕರ್, ಯಶೋಧಾ ವಂಟಗುಡಿ, ಎಸಿಪಿ ನಾರಾಯಣ ಬರ್ಮನಿ ಮತ್ತು ಸಿಸಿಬಿ ಘಟಕದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button