Kannada NewsKarnataka News

ಹೆಸ್ಕಾಂ ನ 20 ಅಧಿಕಾರಿ, ಸಿಬ್ಬಂದಿ ಸಸ್ಪೆಂಡ್

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ :  ಹೆಸ್ಕಾಂ ಕಾಮಗಾರಿಯಲ್ಲಿನ ನೂನ್ಯತೆಗಳ ಕುರಿತು ಬಂದ ದೂರನ್ನಾಧರಿಸಿ ಪ್ರಾಥಮಿಕ ತನಿಖೆ ನಡೆಸಿದ ಅಧಿಕಾರಿಗಳು 20 ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.

ಹೆಸ್ಕಾಂ ಆದೇಶದ ಪೂರ್ಣ ವಿವರ ಇಲ್ಲಿದೆ:

ಹು.ವಿ.ಸ.ಕಂನಿ., ಯ ಕಾರ್ಯ ವ್ಯಾಪ್ತಿಯಲ್ಲಿ ಬರುವ ಕಾರ್ಯ ಮತ್ತು ಪಾಲನೆ ವಿಭಾಗ ಅಥಣಿ ಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಂದಿರುವ ದೂರುಗಳ ಹಿನ್ನಲೆಯಲ್ಲಿ, ಹುವಿಸಕಂನಿ.,ಯ ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು(ತಾಂತ್ರಿಕ), ಮತ್ತು ಮುಖ್ಯ ಆರ್ಥಿಕ ಅಧಿಕಾರಿ ಹಾಗೂ ನಿರ್ದೇಶಕರು(ಹಣಕಾಸು) ರವರ ನೇತೃತ್ವದಲ್ಲಿ ಕಂಪನಿ ಕಛೇರಿಯ ಹಿರಿಯ ಅಧಿಕಾರಿಗಳು ದಿನಾಂಕ:14.09.2021 ರಂದು ಕಾರ್ಯ ಮತ್ತು ಪಾಲನೆ ಅಥಣಿ ವಿಭಾಗಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ (Random Check)ಯನ್ನು ಕೈಗೊಂಡಾಗ ಹಲವಾರು ನ್ಯೂನತೆಗಳು/ಲೋಪದೋಷಗಳು ಕಂಡುಬಂದಿವೆ.

ii. ಆದಕಾರಣ, ಸದರಿ ವಿಷಯದಲ್ಲಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲು ಏಪ್ರಿಲ್-2018 ರಿಂದ ಅಗಸ್ವ-2021 ವರೆಗೆ UNIP, Capex, Additional TC, Water supply, Ganga Kalyan, OTM, Flood PMREA ಹಾಗೂ ಮತ್ತಿತರ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪೂರ್ಣಗೊಂಡಿರುವ ಕಾಮಾಗಾರಿಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಶಾಖಾವಾರು ಅಧಿಕಾರಿಗಳ ತಂಡಗಳನ್ನು ಉಲ್ಲೇಖ:04 ರ ಅಧಿಕೃತ ಜ್ಞಾಪನ ಪತ್ರಗಳಲ್ಲಿ ಪ್ರಧಾನ ವ್ಯವಸ್ಥಾಪಕರು(ತಾಂತ್ರಿಕ) ಕಂಪನಿ ಕಛೇರಿ, ಹುವಿಸಕಂನಿ., ಹುಬ್ಬಳ್ಳಿ ರವರ ಮೇಲುಸ್ತುವಾರಿಯಲ್ಲಿ ಹಾಗೂ ಕಾರ್ಯನಿರ್ವಾಹಕ ಇಂಜಿನೀಯರ್(ವಿ), ಟಿ.ಎ. ಕ್ಯೂ, ಸಿ, ಕಂಪನಿ ಕಛೇರಿ, ಹುವಿಸಕಂನಿ., ಹುಬ್ಬಳ್ಳಿ ರವರ ಮುಖ್ಯಸ್ಥತೆಯಲ್ಲಿ ಶಾಖಾವಾರು ಅಧಿಕಾರಿಗಳ ತಂಡಗಳನ್ನು ರಚಿಸಲಾಗಿರುತ್ತದೆ. ಅದರೊಂದಿಗೆ, ಸದರಿ ಕಾಮಗಾರಿಗಳ ಬಿಲ್ಲುಗಳ ಹೆಚ್ಚುವರಿ ಪಾವತಿ / ಆರ್ಥಿಕ ನಷ್ಟ ಹಾಗೂ ಇನ್ನಿತರ ನ್ಯೂನ್ಯತೆಗಳ ಕುರಿತು ಪರಿಶೀಲಿಸಿ ವಿಶೇಷ ತನಿಖೆ ಕೈಗೊಂಡು ಸಮಗ್ರವಾದ ವರದಿಯನ್ನು ಸಲ್ಲಿಸುವಂತೆ ಆರ್ಥಿಕ ಸಲಹೆಗಾರರು(ಆಂ.ಪ) ಕಂಪನಿ ಕಛೇರಿ, ಹುವಿಸಕಂನಿ., ಹುಬ್ಬಳ್ಳಿ ರವರಿಗೆ ನಿರ್ದೇಶನ ನೀಡಲಾಗಿರುತ್ತದೆ.

ಅದರನ್ವಯ, ಕಾರ್ಯನಿರ್ವಾಹಕ ಇಂಜಿನೀಯರ್(ವಿ), ಟಿ.ಎ. ಕ್ಯೂ. ಸಿ, ಕಂಪನಿ ಕಛೇರಿ, ಹುವಿಸಕಂನಿ., ಹುಬ್ಬಳ್ಳಿ ರವರು ಸಲ್ಲಿಸಿದ ವರದಿ ಹಾಗೂ ಆರ್ಥಿಕ ಸಲಹೆಗಾರರು(ಆಂ.ಪ) ಕಂಪನಿ ಕಛೇರಿ, ಹುವಿಸಕಂನಿ., ಹುಬ್ಬಳ್ಳಿ ರವರು ಸಲ್ಲಿಸಿದ ಪ್ರಾಥಮಿಕ ವರದಿ ಗಳನ್ವಯ ಅಥಣಿ ವಿಭಾಗದಲ್ಲಿ ಸದರಿ ಕಾಮಗಾರಿಗಳನ್ನು ನಿರ್ವಹಿಸಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿ/ನೌಕರರು ವಂಚನೆ/ ಮೋಸ ಎಸಗಿ ಹಾಗೂ ಕಂಪನಿಯ ನಿಯಮಗಳನ್ನು ಉಲ್ಲಂಘಿಸಿ ಕಂಪನಿಗೆ ಅಪಾರ ಆರ್ಥಿಕ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.

ವಿಶೇಷ ತನಿಖೆಯು ಇನ್ನೂ ಮುಂದುವರೆದಿರುವ ಪ್ರಯುಕ್ತ ಹಾಗೂ ಸದರಿ ಪ್ರಕರಣದ ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಕಂಪನಿಗೆ ಇನ್ನೂ ಸಂಭವಿಸಬಹುದಾದ ಆರ್ಥಿಕ ಹಾನಿಯನ್ನು ತಡೆಗಟ್ಟಲು ಮತ್ತು ಸದರಿ ಅಧಿಕಾರಿ/ನೌಕರರನ್ನು ಈ ಸ್ಥಿತಿಯಲ್ಲಿ ಅದೇ ಸ್ಥಳದಲ್ಲಿ ಅವರ ಸೇವೆಯನ್ನು ಮುಂದುವರೆಸಿದಲ್ಲಿ, ಸಂಬಂದಪಟ್ಟ ದಾಖಲಾತಿಗಳನ್ನು ತಿದ್ದುವ/ತಿರುಚುವ ಸಂಭವವಿರುವುದರಿಂದ, ಸದರಿ ಅಧಿಕಾರಿ/ನೌಕರರನ್ನು ಅಮಾನತ್ತಿನಲ್ಲಿ ಇಡುವುದು ಅವಶ್ಯವಿರುತ್ತದೆ. ಸದರಿ ಅಧಿಕಾರಿ/ನೌಕರರು ತೋರಿದ ಕರ್ತವ್ಯ ನಿರ್ಲಕ್ಷತನವು ಕವಿಪ್ರನಿನಿ ನೌಕರರ ಸೇವಾ(ನಡತೆ) ನಿಯಮಗಳ ಸಾರ್ವತ್ರಿಕ ಅಧಿನಿಯಮ 3(1)(1,11,11) ಹಾಗೂ ದುರ್ನಡತೆಗೆ ಕಾರಣವಾಗುವ ಕೃತ್ಯಗಳು ಮತ್ತು ಲೋಪಗಳ ಅಧಿನಿಯಮ 33 ರ ಅನುಬಂಧ ದಲ್ಲಿಯ ಕಂಡಿಕೆ 1 ಮತ್ತು vi ರನ್ವಯ ದುರ್ನಡತಗಳು ಕಂಡುಬಂದಿರುವುದರಿಂದ, ತಪ್ಪಿತಸ್ಥ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ ಹೂಡುವುದು ಅವಶ್ಯಕವಾಗಿರುವುದರಿಂದ, ಸದರಿ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ ಹೂಡುವ ಹಕ್ಕನ್ನು ಕಾಯ್ದಿರಿಸಿ ಅವರನ್ನು ಅಮಾನತು ಮಾಡಲಾಗಿದೆ.

ಆದೇಶ

ಸಂಖ್ಯೆ: ಹುವಿಸಕಂನಿ/ಪ್ರವ್ಯ(ಅ)/ಲೆ(ಸಿ)/ಸಲೆ(ಸಿ)/ಹಿಸ(ವಿ)/ವಿವ-266/2021-22 ಸಿವೈಎಸ್ – 5395 85 JAN 2022 ಪೀಠಿಕೆಯಲ್ಲಿ ವಿವರಿಸಿರುವ ಕಾರಣಗಳಿಂದಾಗಿ, ಈ ಕೆಳ ಕಾಣಿಸಿದ ಅಧಿಕಾರಿ/ನೌಕರರನ್ನು ಕವಿಪ್ರನಿನಿ ನೌಕರರ[ವ.ಶಿ.ನಿ ಮತ್ತು ಮೇ] ನಿಯಮಗಳ ನಿಬಂಧನೆ 8 ರ ಮೇರೆಗೆ ಇಲಾಖಾ ವಿಚಾರಣೆ ಜರುಗಿಸುವ ಹಕ್ಕನ್ನು ಕಾಯ್ದಿರಿಸಿಕೊಂಡು, ತಕ್ಷಣದಿಂದ ಜಾರಿಗೆ ಬರುವಂತ ಅಮಾನತ್ತಿನಲ್ಲಿಡಲಾಗಿದೆ.

 

ಅಧಿಕಾರಿ/ನೌಕರರ ಹೆಸರು

ಪದನಾಮ

ಹಾಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳ.

ಶ್ರೀ ಎಸ್. ಎಚ್ ಬಹುರೂಪಿ

ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ)

ಚಿಕ್ಕೋಡಿ ಉಪವಿಭಾಗ,

ಶ್ರೀ ಆರ್ ಹೆಚ್ ಕಲ್ಲಾರಿ

ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ)

ಐಗಳಿ ಉಪವಿಭಾಗ,

ಶ್ರೀಮತಿ ಗೀತಾ ಜಿ ಕಡ್ಡಾಸ್ಕರ ಶ್ರೀ ಜಿ ವಿ ಸಂಪಣ್ಣನವರ

ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ)

ಉಗಾರ ಉಪವಿಭಾಗ

ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ), 33ಕೆ.ವಿ.ಎಸ್ & ಎಲ್ ನೋಡಲ್ ಆಫೀಸ್,

ಹುವಿಸಕಂನಿ, ವಿಜಯಪುರ,

ಶ್ರೀ ವಿ ಜಿ ನಾಯಿಕ

ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ)

ಬೆಳಗಾವಿ ಗ್ರಾಮೀಣ ಉಪವಿಭಾಗ-1

ಶ್ರೀ ಬಿ. ಎಮ್ ಪಾಟೀಲ್

ಲೆಕ್ಕಾಧಿಕಾರಿ

ಅಥಣಿ ವಿಭಾಗ.

 

ಶ್ರೀ ವೈ ಎಸ್ ಕಳಗಡ

ಸಹಾಯಕ ಲೆಕ್ಕಾಧಿಕಾರಿ

ಅಥಣಿ ವಿಭಾಗ,

 

ಮಲಕಪ್ಪ

ಸಹಾಯಕ ಇಂಜಿನೀಯರ್(ವಿ)

ಅಥಣಿ ನಗರ ಶಾಖೆ 1

 

ಶ್ರೀ ವಿ ಎ ಗಣಿ

ಸಹಾಯಕ ಇಂಜಿನೀಯರ್(ವಿ)

ಕಾಗವಾಡ ಶಾಖೆ

 

ಶ್ರೀ ಎಸ್ ಬಿ ಬುಳ್ಳಗೌಡ

ಸಹಾಯಕ ಇಂಜಿನೀಯರ್(ವಿ)

ಐಗಳಿ ಶಾಖೆ

 

ಶ್ರೀ ಡಿ ಕೆ ಕಾಂಬಳ

ಸಹಾಯಕ ಇಂಜಿನೀಯರ್(ವಿ)

ಐನಾಪುರ ಶಾಖೆ,

 

ಶ್ರೀ ಅರ ಸಿ ರಾಠೋಡ

ಸಹಾಯಕ ಇಂಜಿನೀಯರ್(ವಿ)

ಉಗಾರ ಶಾಖೆ.

ಶ್ರೀ ಎಸ್ ಎ ಪಾರ್ಥನಹಳ್ಳಿ

 

ಕಿರಿಯ ಇಂಜಿನೀಯರ್(ವಿ)

ದರೂರು ಶಾಖೆ,

 

ಶ್ರೀ ಎನ್ ಬಿ ನೇಮಣ್ಣವರ

ಕಿರಿಯ ಇಂಜಿನೀಯರ್(ವಿ)

ಜಂಬಗಿ ಶಾಖೆ,

 

ಶ್ರೀ ಬಿ ಎಸ್ ಶೀಲವಂತರ

ಕಿರಿಯ ಇಂಜಿನೀಯರ್(ವಿ)

ಸತ್ತಿ ಶಾಖೆ

 

ಶ್ರೀ ಎಸ್ ಬಿ ಮಹಿಷವಾಡಗಿ

ಕಿರಿಯ ಇಂಜಿನೀಯರ್(ವಿ)

ಕೂಕಟನೂರ ಶಾಖೆ

 

ಶ್ರೀ ಜೆ ಎಸ್ ಕೋಲಕಾರ

ಕಿರಿಯ ಇಂಜಿನೀಯರ್(ವಿ)

ಅಥಣಿ ವಿಭಾಗೀಯ ಉಗ್ರಾಣ,

 

ಶ್ರೀ ಎಮ್ ಕೆ ಕುಲಕರ್ಣಿ

ಹಿರಿಯ ಸಹಾಯಕ (ಬಿ.ಪಿ.ಎ)

ಅಥಣಿ ವಿಭಾಗ.

 

ಶ್ರೀ ಸಿ 6 ಹಿರೇಮಠ

33 ಕೆವಿ ಉಪಕೇಂದ್ರ ನಂದಗಾಂವ

ಅಥಣಿ ಗ್ರಾಮೀಣ ಶಾಖೆ,

 

ಶ್ರೀ ಕೆ ಎಸ್ ಠಕ್ಕಣ್ಣವರ

ಮಾಪಕ ಓದುಗ.

ಸಂಪೂರ್ಣ ಆದೇಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

Athani Suspension Order 25.01.2022

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button