Latest

*2000 ರೂಪಾಯಿ ನೋಟು ರದ್ದು; ನೋಟು ಬದಲಾವಣೆಗೆ ಅರ್ಜಿ ಬಿಡುಗಡೆ ಮಾಡಿದ RBI*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: 2000 ರೂಪಾಯಿ ನೋಟು ದೇಶಾದ್ಯಂತ ಸ್ಥಗಿತಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ನಾಳೆಯಿಂದ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದೆ.

ದೇಶಾದ್ಯಂತ 2016ರಲ್ಲಿ ಜಾರಿಗೆ ಬಂದಿದ್ದ 2000 ರೂ ನೋಟು ವಾಪಸ್ ಪಡೆಯುವುದಾಗಿ ಆರ್ ಬಿಐ ಘೋಷಿಸಿದೆ. ಈ ಹಿನ್ನೆಲೆಯಲ್ಲಿ 2000 ರೂ ಮುಖಬೆಲೆಯ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದ್ದು, ಮೇ 22ರಿಂದ ನೋಟು ಬದಲಾವಣೆ ಆರಂಭವಾಗಲಿದೆ.

ಈ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿತ ರಿಕ್ವೆಸ್ಟ್ ಫಾರ್ಮ್ ಬಿಡುಗಡೆ ಮಾಡಿದೆ. ಅರ್ಜಿ ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಸುವ ಮೂಲಕ 2000 ರೂ ಮುಖ ಬೆಲೆಯಲ ನೋಟು ಬದಲಿಸಿಕೊಳ್ಳಬೇಕು. ಈ ಅರ್ಜಿ ನೋಟು ಬದಲಾವಣೆ ಮಾಡುವವರಿಗೆ ಮಾತ್ರ ಅನ್ವಯವಾಗಲಿದ್ದು, ಗ್ರಾಹಕರು ತಮ್ಮ ಬಳಿ 2000 ರೂ ನೋಟುಗಳಿದ್ದರೆ ಆಯಾ ಬ್ಯಾಂಕ್ ಶಾಖೆಗಳಿಗೆ ತೆರಳಿ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಹಣ ತಮ್ಮ ಖಾತೆಗೆ ಜಮೆ ಮಾಡಲು ಈ ಫಾರ್ಮ ಅನ್ವಯವಾಗಲ್ಲ, ಕೇವಲ ನೋಟು ವಿನಿಮಯ ಮಾಡಿಕೊಳ್ಳಲು ಮಾತ್ರ ಅನ್ವಯವಾಗಲಿದೆ.

Home add -Advt

ಮೇ 19ರಂದು ಆರ್ ಬಿಐ 2000 ರೂಪಾಯಿ ನೋಟುಗಳನ್ನು ರದ್ದು ಮಾಡುವುದಾಗಿ ಘೋಷಿಸಿತ್ತು. ತಕ್ಷಣದಿಂದಲೇ 2000 ರೂಪಾಯಿ ನೋಟಿಗೆ ಬದಲಾಗಿ ಬೇರೆ ನೋಟುಗಳನ್ನು ಜನರಿಗೆ ವಿತರಿಸಲು, ಅದನ್ನು ಖಾತೆದರರ ಠೇವಣಿಗೆ ಜಮೆ ಮಾಡಿಸಿಕೊಳ್ಳಲು ಬ್ಯಾಂಕ್ ಗಳಿಗೆ ಸೂಚಿಸಿತ್ತು. ನೋಟು ಬದಲಾವಣೆಗೆ ಸೆಪ್ಟೆಂಬರ್ 30ರವರೆಗೆ ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ನೋಟು ಬದಲಾವಣೆ ಚಾಲನೆ ದೊರೆಯಲಿದ್ದು, ಗ್ರಾಹಕರು ಒಂದು ದಿನಕ್ಕೆ ಗರಿಷ್ಠ 20 ಸಾವಿರ ರೂಪಾಯಿ ಅಂದರೆ 10 ನೋಟುಗಳನ್ನು ಇತರೆ ಮೌಲ್ಯದ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಬಹುದು.

https://pragati.taskdun.com/headconstablesuicidekalaburgi/


Related Articles

Back to top button