ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಮಾಧ್ಯಮ ಸಮ್ಮೇಳನ ಜೂನ್ 9 ರಿಂದ 11 ರವರೆಗೆ ನೆಹರು ನಗರದ ಕೆ.ಎಲ್.ಇ ಡಾ. ಹೆಚ್.ಬಿ ರಾಜಶೇಖರ ಸಭಾ ಭವನದಲ್ಲಿ ನಡೆಯಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಪಾಲ್ಗೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿಲೀಪ್ ಕುರಂದವಾಡೆ ಅವರು ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಪತ್ರಕರ್ತರು, ಸಂಪಾದಕರು ಹಾಗೂ ಸಾಧಕರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾದ ಡಾ. ಭೀಮಶಿ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಆಗಮಿಸಲಿದ್ದಾರೆ. ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಎಚ್.ಆರ್. ರಂಗನಾಥ, ವಿ.ಆರ್.ಎಲ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಅತಿಥಿಗಳಾಗಿ ಶ್ರೀಲಂಕಾ ದೇಶದ ಅಂತಾರಾಷ್ಟ್ರೀಯ ಖ್ಯಾತ ಕ್ರಿಕೆಟ್ ಪಟು ಸನತ್ ಜಯಸೂರ್ಯ, ಖ್ಯಾತ ಉದ್ಯಮಿ ಸಂಜಯ ಘೋಡಾವತ್, ಶ್ರೀಲಂಕಾ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಭೋವೆಂಕಾ ಹರ್ಥ, ಶ್ರೀಲಂಕಾ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾದ ಛಲಕಾ ಗಜಬಾಹು ಹಾಗೂ ಭಾರತೀಯ ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಬಿ.ವಿ ಮಲ್ಲಿಕಾರ್ಜುನಯ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮತ್ತು ಬೆಳಗಾವಿ ಜಿಲ್ಲಾ ಘಟಕದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮ ಸಮ್ಮೇಳನದಲ್ಲಿ ಪರಿಸರ ಹಾಗೂ ಮಾಧ್ಯಮ ಚಿಂತನಾಗೋಷ್ಟಿ ನಡೆಯಲಿದ್ದು, ದಕ್ಷಿಣ ಕೊರಿಯಾದ ಹಿರಿಯ ಪತ್ರಕರ್ತೆ ಗೀತಿಕಾ ತಾಲೂಕದಾರ, ಲಂಡನ್ ಹಿರಿಯ ಪತ್ರಕರ್ತರಾದ ಫಾತೂಮ್, ಶ್ರೀಲಂಕಾದ ಉಪುಲ್ ಜಯಸಿಂಘೆ, ಸೌಜ್ಞಾ ಪೌಡೆಲ್, ಡಾ. ಗೀತಾ ಕಿರಣ್, ಬಾಂಗ್ಲಾದೇಶದ ಮೊಹಮದ್ ಶಾಮೀಮ್ ಅವರು ಇರಲಿದ್ದಾರೆ ಎಂದು ಕುರಂದವಾಡೆ ತಿಳಿಸಿದರು.
ಜೂನ್ 9 ರಂದು ಅಂತರಾಷ್ಟ್ರೀಯ ಪತ್ರಕರ್ತರ ಆಗಮನ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಜೂನ್ 10 ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅತಿಥಿಗಳ ಭಾಷಣ ಹಾಗೂ ಮಧ್ಯಾಹ್ನ ಚಿಂತನಾಗೋಷ್ಠಿ ಕಾರ್ಯಕ್ರಮ ಅದೇ ರೀತಿಯಲ್ಲಿ ಜೂನ್ 11 ರಂದು ಅಂತಾರಾಷ್ಟ್ರೀಯ ಪತ್ರಕರ್ತರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ.
ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಡಾ: ಭೀಮಶಿ ಜಾರಕಿಹೊಳಿ, ಹಿರಿಯ ಪತ್ರಕರ್ತರಾದ ನೌಶದ್ ಬಿಜಾಪುರ, ಶ್ರೀಶೈಲ ಮಠದ, ಶ್ರೀಕಾಂತ ಕುಬಕಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
*ಕರ್ನಾಟಕಕ್ಕೆ ಹೃದಯ ವೈಶಾಲ್ಯತೆಯಿಂದ ನೆರವು ನೀಡಿ: ಪ್ರಧಾನಿಗೆ ಸಿಎಂ ಮನವಿ*
8 hours ago
*ವಿವಿಧೆಡೆ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಜನ್ಮ ದಿನ ಅದ್ಧೂರಿ ಆಚರಣೆ *
8 hours ago
*ಮನದ ಕತ್ತಲನ್ನು ಅಳಿಸಿ, ಅರಿವಿನ ಬೆಳಕನ್ನು ಮೂಡಿಸುವವರೆ ಗುರು : ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು*
11 hours ago
*ಕೆಎಲ್ಇ ಸಂಸ್ಥೆಯಿಂದ ಬೆಳಗಾವಿಗೆ ಜಾಗತಿಕ ಖ್ಯಾತಿ; ಅಂಕಲಿಯಲ್ಲಿ ಡಾ. ಪ್ರಭಾಕರ ಕೋರೆ ಅವರ 79ನೇ ಜನ್ಮದಿನದ ಅಂಗವಾಗಿ ಭವ್ಯ ಸನ್ಮಾನ*
11 hours ago
*ಕಬಿನಿ ತುಂಬುತ್ತಿದೆ, ಜಲಾಶಯ ತುಂಬಿದಾಗ ನೀರನ್ನು ಹರಿಸಲೇಬೇಕು: ಸಿಎಂ ಡಿ.ಕೆ.ಶಿವಕುಮಾರ್*
12 hours ago
*ವಿವೇಕ ಸ್ಮಾರಕ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ*
12 hours ago
*ಮುಂದಿನ 5 ವರ್ಷಗಳಿಗೆ ಪಿಎಂ-ಸಮ್ಮಾನ್ ನಿಧಿ ಯೋಜನೆ ವಿಸ್ತರಣೆ: ಈರಣ್ಣ ಕಡಾಡಿ ಹರ್ಷ*
12 hours ago
*ಸೋಮವಾರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ; ಹಲವು ಹೊಸ ಮುಖಗಳಿಗೆ ಅವಕಾಶ*
14 hours ago
*ಸ್ವರಾಜ್ಯದ ಹರಿಕಾರ ತಿಲಕರಿಗೆ ಗೌರವ ನಮನ: ತಿಲಕ ಚೌಕ್ನಲ್ಲಿ ಕಿರಣ ಜಾಧವ ನೇತೃತ್ವದಲ್ಲಿ ಅಭಿವಂದನಾ ಕಾರ್ಯಕ್ರಮ*
14 hours ago
*ಸೋನಿಯಾ ಗಾಂಧಿಯನ್ನು ‘ಜರ್ಸಿ ಹಸು’ ಎಂದು ನಿಂದಿಸಿದಾಗ, ಚೌಧರಿ ನಗು ‘ಶೂರ್ಪನಖಿ’ಗೆ ಹೋಲಿಸಿದಾಗ, ಸುನಂದಾರನ್ನು’50 ಕೋಟಿ ಗರ್ಲ್ಫ್ರೆಂಡ್’ ಎಂದು ಹೀಯಾಳಿಸಿದಾಗ ತಾಯಿ, ಸಹೋದರಿ, ಮಹಿಳಾ ಮರ್ಯಾದೆ ಪ್ರವಚನ ಯಾವ ಗುಹೆಯಲ್ಲಿ ತಪಸ್ಸು ಮಾಡುತ್ತಿತ್ತು? *