27 ಗಂಟೆ! ಗಣೇಶ ವಿಸರ್ಜನೆ ದಾಖಲೆ ನಿರ್ಮಾಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗುರುವಾರ ಸಂಜೆ 4 ಗಂಟೆಗೆ ಆರಂಭವಾದ ಗಣೇಶ ವಿಸರ್ಜನೆ ಮೆರವಣಿಗೆ ಶುಕ್ರವಾರ ರಾತ್ರಿ 7 ಗಂಟೆಗೆ ಮುಕ್ತಾಯಗೊಂಡಿದೆ. ಸತತ 27 ಗಂಟೆಗಳ ಮೆರವಣಿಗೆಯ ನಂತರ ಕೊನೆಯ ಗಣಪತಿಯನ್ನು ರಾತ್ರಿ 7.10ಕ್ಕೆ ವಿಸರ್ಜಿಸಲಾಯಿತು.
ಅವಘಡದಲ್ಲಿ ಯುವಕನೋರ್ವ ಮೃತನಾಗಿದ್ದು ಬಿಟ್ಟರೆ ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಲಿಲ್ಲ. ಗಣೇಶೋತ್ಸವ ಶಾಂತಿಯುತವಾಗಿ ನಡೆದಿರುವುದಕ್ಕೆ ಶಾಸಕ ಅನಿಲ ಬೆನಕೆ ಅವರು ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಗಣೇಶೋತ್ಸವ ಮಹಾಮಂಡಳಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇನ್ನೊಂದು ವಿಶೇಷವೆಂದರೆ, ಗಣೇಶೋತ್ಸವ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ಹೆಸ್ಕಾಂ ಸಿಬ್ಬಂದಿ ಕೂಡ ಶ್ರಮವಹಿಸಿದ್ದರು. ಪೊಲೀಸರು ಗಲಾಟೆಯಾಗದಂತೆ ನಿರಂತರವಾಗಿ ಕರ್ತವ್ಯ ನಿರ್ವಹಿಸಿದರೆ, ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಕೈಕೊಡದಂತೆ ಸಂಪೂರ್ಣ ಎಚ್ಚರವಿದ್ದು ಕ್ರಮ ತೆಗೆದುಕೊಡರು.
ಎತ್ತರದ ಗಣೇಶ ಮೂರ್ತಿಗಳೂ ಇದ್ದಿದ್ದರಿಂದ ಅವು ವಿದ್ಯುತ್ ಲೈನ್ ಗೆ ತಗುಲಿ ಅವಘಡವಾಗದಂತೆ ನೋಡಿಕೊಂಡರು. ಅಪಾಯಕಾರಿ ಸ್ಥಳಗಳಲ್ಲಿ ಪವರ್ ಮ್ಯಾನ್ ಗಳನ್ನು ನಿಲ್ಲಿಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿತ್ತು ಎಂದು ಹೆಸ್ಕಾಂ ಸಹಾಯಕ ಎಂಜಿನಿಯರ್ ಅರವಿಂದ ಗದಗಕರ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಸಂಬಂಧಿಸಿದ ಸುದ್ದಿಗಳು –
ಗಣೇಶೋತ್ಸವ ಮೆರವಣಿಗೆ ವೇಳೆ ಅವಘಡ -ಯುವಕ ಬಲಿ
ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಗೆ ಚಾಲನೆ -Updated
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ