Latest

ಆನ್ ಲೈನ್ ಪಿಯು ಕ್ಲಾಸ್ ಆರಂಭ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನಲ್ಲೇ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ ಈಗಗಾಲೇ ಆನ್ ಲೈನ್ ಕ್ಲಾಸ್ ಆರಂಭವಾಗಿದೆ. ಇದೀಗ ಕಾಲೇಜು ವಿದ್ಯಾರ್ಥಿಗಳಿಗೆ ಕೂಡ ಆನ್ ಲೈನ್ ತರಗತಿಗಳು ಆರಂಭವಾಗುತ್ತಿವೆ.

ಹೌದು. ಕೊರೊನಾ ಸಂಕಷ್ಟದಿಂದಾಗಿ ಆನ್ ಲೈನ್ ಕ್ಲಾಸ್ ಅನಿವಾರ್ಯವಾಗಿದ್ದು, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯೂಟ್ಯೂಬ್‌ ಪಾಠ ಇಂದಿನಿಂದ ಆರಂಭವಾಗಿದೆ.

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯೂ ಟ್ಯೂಬ್‌ ಮೂಲಕ ಪ್ರಿ-ರೆಕಾರ್ಡೆಡ್‌ ಕ್ಲಾಸ್ ನಡೆಸಲಾಗುತ್ತಿದೆ. ಪ್ರತಿ ದಿನ 45 ನಿಮಿಷಗಳ 4 ಅವಧಿಯ ತರಗತಿಗಳು ನಡೆಯುತ್ತಿವೆ. ಪ್ರತಿ ವಿಷಯಕ್ಕೆ ಎರಡು ಅವಧಿ ನಿಗದಿಯಾಗಿದೆ. ಒಂದನೇ ಅವಧಿಯಲ್ಲಿ ವಿಡಿಯೊ ತರಗತಿ, ಎರಡನೇ ಅವಧಿಯಲ್ಲಿ ಈ ತರಗತಿಗೆ ಸಂಬಂಧಿಸಿದ ಸಂದೇಹ ನಿವಾರಣೆ, ನೋಟ್ಸ್‌, ಬರವಣಿಗೆ ಇರಲಿದೆ.

ಆಯಾ ಕಾಲೇಜಿನ, ಆಯಾ ವಿಷಯಗಳ ಉಪನ್ಯಾಸಕರು ಈ ಬಗ್ಗೆ ನಿಗಾ ವಹಿಸಬೇಕು. ಜಿಲ್ಲಾ ಉಪ ನಿರ್ದೇಶಕರು, ಪ್ರಾಂಶುಪಾಲರ ಹೆಗಲಿಗೆ ಜವಾಬ್ದಾರಿ ನೀಡಲಾಗಿದೆ. ಇವರ ಮೂಲಕ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಲು‍ಪಿಸಿ ಪ್ರತಿ ದಿನ ತರಗತಿಗಳನ್ನು ವೀಕ್ಷಿಸಲು ಪ್ರೇರೇಪಿಸಬೇಕು. ಆಯಾ ಪಾಠಕ್ಕೆ ಸಂಬಂಧಿಸಿದ ನೋಟ್ಸ್‌ಗಳು ಅದೇ ದಿನ ಲಭ್ಯವಾಗಲಿವೆ ಎಂದು ಪಿಯು ಮಂಡಳಿ ಸೂಚಿಸಿದೆ‌.

Home add -Advt

https://www.youtube.com/c/dpuedkpucpa ಈ ಯೂಟ್ಯೂಬ್‌ ಲಿಂಕ್‌ನಲ್ಲಿ ಪಾಠಗಳನ್ನ ಕೇಳಬಹುದು.

ಈ ಕುರಿತು ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ನಿಗಾ ವಹಿಸಬೇಕು. ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ವಿಷಯವಾರು ಉಪನ್ಯಾಸಕರಿಗೆ ವಿಂಗಡಿಸಿ ಅಪ್‌ ಲೋಡ್‌ ಆಗಿರುವ ಪ್ರಿ–ರೆಕಾರ್ಡೆಡ್‌ ವಿಡಿಯೊ ವೀಕ್ಷಿಸಲು ಸೂಚಿಸಬೇಕು. ಸಂದೇಹಗಳಿದ್ದರೆ ವಾಟ್ಸ್ಆ್ಯಪ್‌ ಮೂಲಕ ಪರಿಹರಿಸುವಂತೆ ಸೂಚನೆ ನೀಡಲಾಗಿದೆ.

Related Articles

Back to top button