Kannada NewsKarnataka NewsLatest

*ಈಜಲು ತೆರಳಿದ್ದ ಮೂವರು BE ವಿದ್ಯಾರ್ಥಿಗಳು ನೀರುಪಾಲು*

ಪ್ರಗತಿವಾಹಿನಿ ಸುದ್ದಿ; ಕೊಡಗು: ಈಜಲು ತೆರಳಿದ್ದ ಮೂವರು ಬಿಇ ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಅರ್ಜಿ ಗ್ರಾಮದ ಬರಪೊಳೆ ನದಿಯಲ್ಲಿ ನಡೆದಿದೆ.

ಪೊನ್ನಂಪೇಟೆಯ ಸಿಐಟಿ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರುಪಾಲಾದವರು. ವೀಕೆಂಡ್ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬರಪೊಳೆಗೆ ತೆರಳಿದ್ದರು.

ನದಿಯಲ್ಲಿ ಈಜಲೆಂದು ಇಳಿದಿದ್ದಾಗ ನೀರುಪಾಲಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊನ್ನಂಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.


Related Articles

Back to top button