Latest

*ಈಜಲು ತೆರಳಿದ್ದಾಗ ಮತ್ತೊಂದು ದುರಂತ: ಮೂವರು ಮಕ್ಕಳು ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಬೇಸಿಗೆ ರಜೆ ಕಾರಣಕ್ಕೆ ಶಾಲೆಗಳಿಗೆ ರಜೆ ಇರುವಿದರಿಂದ ಮಕ್ಕಳು ಅಜ್ಜಿ ಮನೆ, ಸ್ನೇಹಿತರ ಮನೆಯೆಂದು ಆಟದ ಜೊತೆ ಊರಿಂದ ಊರುಗಳಿಗೆ ತಿರುಗುತ್ತಿರುವ ಮಕ್ಕಳ ಮೇಲೆ ಪೋಷಕರು ನಿಗಾವಹಿಸುವ ಅಗತ್ಯವಿದೆ. ಕಳೆದ ಮೂರು ದಿನಗಳಿಂದ ಆಟವಡಲೆಂದು, ಈಜಲೆಂದು ಹೋದ ಮಕ್ಕಳು ದುರಂತಕ್ಕೀಡಾಗುತ್ತಿರುವ ಸಾಲು ಸಾಲು ಪ್ರಕರಣಗಳು ವರದಿಯಾಗಿತ್ತಿವೆ.

ಎರಡು ದಿನಗಳ ಹಿಂದೆ ವಿಜಯಪುರದಲ್ಲಿ ಒಂಟೆ ಹುಡುಕಲು ಹೋದ ಮೂವರು ಮಕ್ಕಳು, ನೀರಿನ ಶುದ್ಧೀಕರಣ ಘಟಕಕ್ಕೆ ಬಿದ್ದು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ನಿನ್ನೆ ಹಾಸನದ ಕೆರೆಯಲ್ಲಿ ಈಜಲು ಹೋದ ಮಕ್ಕಳು ಕೆರೆಯಲ್ಲಿತುಂಬಿದ್ದ ಊಳಿನಲ್ಲಿ ಸಿಲುಕಿ ಮೃತಪಟ್ಟಿದ್ದರು. ಈ ಘಟನೆ ಬೆನ್ನಲ್ಲೇ ಇದೀಗ ರಾಮನಗರದ ಅಚ್ಚಲು ಗ್ರಾಮದಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳು ನೀರುಪಾಲಾಗಿರುವ ಘಟನೆ ನಡೆದಿದೆ.

ಬೆಟ್ಟದಲ್ಲಿರುವ ತಗ್ಗು ಪ್ರದೇಶಕ್ಕೆ ಈಜಲೆಂದು ಹೋದವರು ನೀರುಪಾಲಾಗಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಮಕ್ಕಳ ಮೃತದೇಹಕ್ಕೆ ಹುಡುಕಾಟ ನಡೆಸಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button