Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ 3 ದಿನ ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಬೆಳಗಾವಿಯಲ್ಲಿ 3 ದಿನ ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ.

ಬೆಳಗಾವಿಯ ನೆಹರು ನಗರದ ರಾಮದೇವ್ ಹೋಟೆಲ್ ಹಿಂಭಾಗದಲ್ಲಿರುವ ಕನ್ನಡ ಭವನದಲ್ಲಿ ನವೆಂಬರ್ 7, 8 ಹಾಗೂ 9ರಂದು ನಾಟಕಗಳು ನಡೆಯಲಿವೆ. 

ರಂಗ ಆರಾಧನಾ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಝಕೀರ್ ನದಾಫ್ ಬುಧವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಸಂಘಟನೆಯು ಕಳೆದ 29 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸಂಘಟನೆಯ ರಂಗ ಚಟುವಟಿಕೆಯನ್ನು  ಬೆಳಗಾವಿಯವರೆಗೂ ವಿಸ್ತರಿಸುವ  ಹಾಗೂ ರಂಗಭೂಮಿಗೆ ಅಪಾರ ಕೊಡುಗೆಯನ್ನು ನೀಡಿದ ದಿವಂಗತ ಏಣಗಿ ಬಾಳಪ್ಪನವರನ್ನು ಸ್ಮರಿಸಿಕೊಳ್ಳುವ ನಿಮಿತ್ಯ ಹಾಗೂ ಬೆಳಗಾವಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಏಣಗಿ ಬಾಳಪ್ಪನವರ ಹೆಸರಿನಲ್ಲಿ ರಂಗಮಂದಿರಗಳು ನಿರ್ಮಾಣಗೊಳ್ಳಬೇಕು ಹಾಗೂ ಏಣಗಿಯಲ್ಲಿ ನಾಟ್ಯ ಭೂಷಣ ಬಾಳಪ್ಪನವರ ಹೆಸರಿನಲ್ಲಿ ಸ್ಮಾರಕ  ನಿರ್ಮಾಣಗೊಳ್ಳಬೇಕೆಂದು  ಸರ್ಕಾರದ ಗಮನ ಸೆಳೆಯುವ ಕಾರಣಕ್ಕಾಗಿ ಅವರ ಹೆಸರಿನಲ್ಲಿ *ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ* ದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಈ ನಾಟಕೋತ್ಸವವನ್ನು ಸಾಹಿತಿ ದಿವಂಗತ ಎಸ್‌. ಎಲ್. ಭೈರಪ್ಪ, ರಂಗಕರ್ಮಿಗಳಾದ ದಿವಂಗತ ಯಶವಂತ ಸರದೇಶಪಾಂಡೆ, ದಿವಂಗತ ರಾಜು ತಾಳಿಕೋಟಿ, ದಿವಂಗತ ಡಿ. ಹಣುಮಕ್ಕ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ದಿವಂಗತ ಶ್ರೀಮತಿ ಅನ್ನಪೂರ್ಣ ಅಶೋಕ ಮಳಗಲಿ ಇವರುಗಳಿಗೆ ಅರ್ಪಿಸಲಾಗುವುದು‌. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗ ಸೃಷ್ಟಿ ಕಲಾತಂಡ ಹಾಗೂ ಬೆಳಗಾವಿಯ ಕನ್ನಡ ಭವನ ದ ಸಹಯೋಗದೊಂದಿಗೆ ಶುಕ್ರವಾರ ದಿನಾಂಕ 7-11-25 ರಿಂದ ರವಿವಾರ ದಿನಾಂಕ 9-11-25 ರ ವರೆಗೆ ಮೂರು ದಿನಗಳ ಕಾಲ ಪ್ರತಿದಿನ ಸಂಜೆ 6-30 ಕ್ಕೆ ಮೂರು ನಾಟಕಗಳ ಪ್ರದರ್ಶನದೊಂದಿಗೆ ನೆರವೇರಲಿದೆ‌ ಎಂದರು.

Home add -Advt

ಪತ್ರಿಕಾಗೋಷ್ಠಿಯಲ್ಲಿ ರಂಗ ಆರಾಧನಾ ಸಂಘಟನೆ ಅಧ್ಯಕ್ಷ ಶ್ರೀನಿವಾಸಾ ಗದಗ, ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ್, ಉಪಾಧ್ಯಕ್ಷ ಎಂ.ಕೆ.ಹೆಗಡೆ, ಕಾರ್ಯದರ್ಶಿ ಶರಣಗೌಡ ಪಾಟೀಲ, ರಂಗ ಆರಾಧನಾ ಸಂಘಟನೆಯ ಕಾರ್ಯದರ್ಶಿ ಶಿವಾನಂದ ತಾರಿಹಾಳ, ಕನ್ನಡ ಭವನದ ಕಾರ್ಯದರ್ಶಿ ಯ.ರು.ಪಾಟೀಲ ಮೊದಲಾದವರಿದ್ದರು.

ಕಾರ್ಯಕ್ರಮದ ವಿವರ

ಶುಕ್ರವಾರ ದಿನಾಂಕ 07.11.2025  ಸಂಜೆ – 6 – 30ಕ್ಕೆ ನೆರವೇರುವ ಉದ್ಘಾಟನಾ ಸಮಾರಂಭದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ನೀಲಗಂಗಾ ಚರಂತಿಮಠ, ಡಾ|| ಗುರುದೇವಿ ಹುಲೆಪ್ಪನವರಮಠ, ಕೆ. ಹೆಚ್. ಚನ್ನೂರ, ಸುಭಾಸ್ ಏಣಗಿ‌, ಸರ್ಜೂ ಕಾಟ್ಕರ್‌, ವಿದ್ಯಾವತಿ ಭಜಂತ್ರಿ, ಮಂಗಲಾ ಮೆಟಗುಡ್ಡ, ಶೈಲಜಾ ಭಿಂಗೆ, ಅರವಿಂದ ಕುಲಕರ್ಣಿ, ಸವಿತಾ ಭೈರಪ್ಪ, ರತ್ನಪ್ರಭಾ ಬೆಲ್ಲದ, ವಿದ್ಯಾ ಗೌಡರ ಇವರುಗಳಿಗೆ ಗೌರವಾರ್ಪಣೆ ನಡೆಯಲಿದೆ.

 ಇದೇ ಸಂದರ್ಭದಲ್ಲಿ ನಾಟಕಕಾರ ರಂಗ ನಿರ್ದೇಶಕ ಝಕೀರ ನದಾಫ ರಚನೆಯ ನೆಲಮುಗಿಲು ಮತ್ತು ಹಾಲು ಬಟ್ಟಲದೊಳಗಿನ ಪಾಲು ನಾಟಕ ಕೃತಿ ಲೋಕಾರ್ಪಣೆಗೊಳ್ಳಲಿದ್ದು ನಂತರದಲ್ಲಿ ರಂಗಸಂಪದ ಬೆಳಗಾವಿ ಇವರಿಂದ ನಕ್ಷತ್ರ ಯಾತ್ರಿಕರು ನಾಟಕ ಪ್ರದರ್ಶನ ಗೊಳ್ಳಲಿದೆ. ಈ ನಾಟಕದ ರಚನೆ ಸಂಧ್ಯಾ ಎಸ್.ಹಾಗೂ ನಿರ್ದೇಶನ ಸವಿತಾ ಭೈರಪ್ಪ ಮತ್ತು ಸಂಗೀತ ಶ್ರೀಪತಿ ಮಂಜನಬೈಲು.

ಶನಿವಾರ ದಿನಾಂಕ 8.11.2025 ರ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಬಸವರಾಜ ಜಗಜಂಪಿ, ಎಂ.ಎಸ್. ಇಂಚಲ್, ರಮೇಶ್ ಜಂಗಲ್, ಶಿರೀಷ ಜೋಶಿ, ವಿನೋದ ಅಂಬೇಕರ, 

 ಬಾಬಾಸಾಹೇಬ ಕಾಂಬ್ಳೆ, ಪಿ‌.ಜಿ. ಕೆಂಪಣ್ಣವರ, ಡಾ. ರಾಮಕೃಷ್ಣ ಮರಾಠೆ, ಬಸವರಾಜ ನಿಂಬಾಳ ಇವರುಗಳಿಗೆ ಗೌರವಾರ್ಪಣೆ ನಡೆಯಲಿದೆ. ನಂತರದಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ (ರಿ) ಇವರಿಂದ. ಮಂಜು ನಾಯಕ್ ಚಳ್ಳೂರು ರವರ ಕಥೆಯಾಧಾರಿತ  ಹಾಲು ಬಟ್ಟಲದೊಳಗಿನ ಪಾಲು ನಾಟಕ ಪ್ರದರ್ಶನಗೊಳ್ಳಲಿದ್ದು ಈ ನಾಟಕದ ರಚನೆ ಮತ್ತು ನಿರ್ದೇಶನ ಝಕೀರ ನದಾಫ ರವರದ್ದಾಗಿದೆ.

ರವಿವಾರ ದಿನಾಂಕ 09.11.2025 ರ ಸಮಾರೋಪ ಸಮಾರಂಭದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಎಲ್.ಎಸ್. ಶಾಸ್ತ್ರಿ, ಯ.ರು. ಪಾಟೀಲ, ಬಸವರಾಜ ರೊಟ್ಟಿ, 

ಮಧುಕರ ಗುಂಡೇನಟ್ಟಿ, ರವಿ ಕೊಟಾರಗಸ್ತಿ, ಆನಂದ ಪುರಾಣಿಕ, ಎಸ್.ಎ. ಅರಕೇರಿ, ಅರವಿಂದ ಹುನಗುಂದ, ರವಿ ಭಜಂತ್ರಿ, ಆನಂದ ಭಿಂಗೆ ಇವರುಗಳನ್ನು ಸನ್ಮಾನಿಸಲಾಗುವುದು. ನಂತರದಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ) ಸವದತ್ತಿ ಇವರಿಂದ ನೆಲಮುಗಿಲು ನಾಟಕ ಪ್ರದರ್ಶನ ಗೊಳ್ಳಲಿದ್ದು ಈ ನಾಟಕವನ್ನು ರಚಸಿ, ನಿರ್ದೇಶಿಸಿದವರು  ಝಕೀರ ನದಾಫ.

Related Articles

Back to top button