ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಜಿಐಟಿಯ ರಸಾಯನಶಾಸ್ತ್ರ ವಿಭಾಗ, ಮಾ. 2 ರಿಂದ 4 ರವರೆಗೆ ಆಯೋಜಿಸಿದ್ದ “ಅಡ್ವಾನ್ಸಸ್ ಇನ್ ಮೆಟೀರಿಯಲ್ ಸೈನ್ಸ್ ಆ್ಯಂಡ್ ಕೆಮಿಸ್ಟ್ರಿ (ಎಎಂಎಸ್ಸಿ -2023)‘ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಸಮಾರೋಪಗೊಂಡಿತು.
ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಉನ್ನತ ಮಹಾವಿದ್ಯಾಲಯ ಮತ್ತು ಕೈಗಾರಿಕೆಗಳಿಂದ 80 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಸಮ್ಮೇಳನದ ಈ ಮೂರು ದಿನಗಳಲ್ಲಿ 14 ಆಹ್ವಾನಿತ ಭಾಷಣ ಮತ್ತು 70 ಮೌಖಿಕ ಪ್ರಸ್ತುತಿಗಳನ್ನು ನೀಡಲಾಯಿತು.
ಪ್ರೊ.ಕೆ.ಎಸ್. ರಾಣೆ, ಪ್ರೊ.ವೀಣಾ ದೇಸಾಯಿ, ಡಾ.ಎಂ.ಕೆ.ರೆಂದಾಳೆ, ಡಾ. ಹರ್ಷಿತ ಕುಲಕರ್ಣಿ, ಡಾ.ವೈಭವ್ ಚಾಟೆ, ಡಾ.ಅನಿಲ ಗಾವಡೆ, ಡಾ.ಡಿ.ಬಿ.ಕುಲಕರ್ಣಿ, ಡಾ.ಎಂ.ಎಸ್.ಪಾಟೀಲ್, ಡಾ.ವಿನಾಯಕ ಮಲಿಕ್ ಮತ್ತು ಡಾ.ಎಂ.ಎಂ.ನಡಕಟ್ಟಿ , ಈ ಮೌಖಿಕ ನಿರೂಪಣೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಡಾ.ಎನ್.ಎಚ್.ಆಯಾಚಿತ್ ಅವರು ಸನ್ಮಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ, ಗೌರವ ಅತಿಥಿಗಳಾಗಿ ಐಐಟಿ ಮದ್ರಾಸ್ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಬಸವರಾಜ ಎಂ.ಜಿ. ಆಗಮಿಸಿದ್ದರು. ವಿಭಾಗ ಮುಖ್ಯಸ್ಥರು, ರಸಾಯನಶಾಸ್ತ್ರ ಹಾಗೂ ಸಮ್ಮೇಳನದ ಸಂಚಾಲಕ ಡಾ.ರವಿರಾಜ ಎಂ.ಕುಲಕರ್ಣಿ ಅತಿಥಿಗಳನ್ನು ಸ್ವಾಗತಿಸಿ, ಸಮ್ಮೇಳನದ ವರದಿ ಮಂಡಿಸಿದರು.
ಸಮಾರೋಪ ಸಮಾರಂಭದಲ್ಲಿ ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ ಯುಜಿ, ಪಿಜಿ ಮತ್ತು ಪಿಎಚ್‌ಡಿ ವಿವಿಧ ವಿಭಾಗಗಳಿಂದ, 3 ಅತ್ಯುತ್ತಮ ಪೇಪರ್ ಗಳಿಗೆ ಪ್ರಶಸ್ತಿ ನೀಡಲಾಯಿತು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎ.ಮಲ್ಲಾಡಿ ವಂದಿಸಿದರು.
ಕೆಎಲ್‌ಎಸ್ ಆಡಳಿತ ಮಂಡಳಿಯ ಸದಸ್ಯರು, ಜಿಐಟಿಯ ಪ್ರಾಚಾರ್ಯರು, ಅಂತಾರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ರಸಾಯನಶಾಸ್ತ್ರ ವಿಭಾಗವನ್ನು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ