Latest

3 ಇಲಾಖೆ, 856 ಶಿಫಾರಸ್ಸು – ಆಡಳಿತ ಸುಧಾರಣೆ ಆಯೋಗ- 2ರ ಮೊದಲ ವರದಿ (ಏನೇನು ಶಿಫಾರಸ್ಸು ನೋಡಿ)

  ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ರದ್ದುಮಾಡಬಹುದು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣಾ ಆಯೋಗ 2 ಇಂದು ತನ್ನ ಮೊದಲ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿತು.

ರಾಜ್ಯದ ನಾಲ್ಕೂ ಪ್ರಾದೇಶಿಕ ಆಯುಕ್ತರ ಕಾರ್ಯಾಲಯವನ್ನು ರದ್ದುಮಾಡಬಹುದು. ಬೆಂಗಳೂರಿನಲ್ಲಿ ಕಂದಾಯ ಆಯುಕ್ತಾಲಯ ಸ್ಥಾಪಿಸಬಹುದು. ಮನೆ ಬಾಗಿಲಿಗೆ ಪಡಿತರ ವ್ಯವಸ್ಥೆ, ಸಾರಿಗೆ ಇಲಾಖೆ ವಶಪಡಿಸಿಕೊಂಡ ವಾಹನಗಳ ಹರಾಜಿಗೆ ನ್ಯಾಯಾಲಯದ ತೀರ್ಪಿಗೆ ಕಾಯಬೇಕಿಲ್ಲ, ರಸ್ತೆ ಸಾರಿಗೆ ಸಂಸ್ಥೆಯ ಒಂದು ಐಟಿ ಅಧಿಕಾರಿ ಹುದ್ದೆ ರದ್ದು ಮೊದಲಾದ ಶಿಫಾರಸ್ಸುಗಳನ್ನು ಮಾಡಲಾಗಿದೆ.

ಸಾರ್ವಜನಿಕರಿಗೆ ಹತ್ತಿರವಾದ 3 ಇಲಾಖೆಗಳನ್ನು ಮೊದಲ ಹಂತದಲ್ಲಿ ತೆಗೆದುಕೊಳ್ಳಲಾಗಿದೆ. ಕಂದಾಯ, ಆಹಾರ ಮತ್ತು ನಾಗರಿಕೆ ಪೂರೈಕೆ ಇಲಾಖೆ ಹಾಗೂ ಸಾರಿಗೆ ಇಲಾಖೆಗೆ ಸಂಬಂಧಿಸಿದ 856 ಶಿಫಾರಸ್ಸು ಗಳನ್ನು ಮಾಡಲಾಗಿದೆ.

ಕಂದಾಯ ಇಲಾಖೆಗೆ 528, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ 111, ಸಾರಿಗೆ ಇಲಾಖೆಗೆ 217 ಶಿಫಾರಸ್ಸು ಮಾಡಲಾಗಿದೆ.

Home add -Advt

ಆಯೋಗದ ವರದಿಯ ಮುಖ್ಯಾಂಶಗಳು ಇಲ್ಲಿವೆ, ಕ್ಲಿಕ್ ಮಾಡಿ –  Press_note_kannada

 

15 ವರ್ಷಗಳ ದಾಂಪತ್ಯ ಜೀವನ ಅಂತ್ಯ; ಪತ್ನಿಗೆ ವಿಚ್ಛೇದನ ನೀಡಿದ ನಟ ಆಮಿರ್ ಖಾನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button