Latest

ಮುಂದಿನ ಸರ್ಕಾರ ಹೇಗಿರಲಿದೆ?; ಕೋಡಿಮಠ ಶ್ರೀ ನುಡಿದ ಭವಿಷ್ಯವೇನು ಗೊತ್ತಾ?

ಪ್ರಗತಿವಾಹಿನಿ ಸುದ್ದಿ, ವಿಜಯನಗರ: 2023ರ ವರ್ಷದ ಕುರಿತಾಗಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಕೋಡಿಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದು ಮುಂಬರುವ ಸರಕಾರದ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹೇಳಿದ್ದಾರೆ.

ಹೊಸಪೇಟೆಯ ಬಿಜೆಪಿ ನಾಯಕಿ ರಾಣಿ‌ ಸಂಯುಕ್ತ ಅವರ ನಿವಾಸದಲ್ಲಿ  ಪಾದಪೂಜೆ ಸ್ವೀಕರಿಸಿದ ಬಳಿಕ ಭವಿಷ್ಯವಾಣಿ ನುಡಿದ ಶ್ರೀಗಳು, ‘ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು’ ಎಂದು ಒಗಟಾಗಿ ನುಡಿದಿದ್ದಾರೆ.

2023ಕ್ಕೆ ಜಾಗತಿಕ ಮಟ್ಟದಲ್ಲಿ ಹಲವು ಸಮಸ್ಯೆ ಎದುರಾಗಲಿವೆ. ಇದರ ಮುನ್ಸೂಚನೆಗಳು ಸಾಧು ಸಂತರಿಗೆ ಲಭಿಸಿವೆ. ಜಾಗತಿಕವಾಗಿ ಬಹುದೊಡ್ಡ ಸಮಸ್ಯೆ ಕಾಡಲಿದೆ. ಕೆಲವು ಪ್ರತಿಷ್ಠಿತರನ್ನೇ ಕಳೆದುಕೊಳ್ಳಬೇಕಾದೀತು ಎಂದು ಅವರ ವಾಣಿಯನ್ನು ವ್ಯಾಖ್ಯಾನಿಸಲಾಗಿದೆ.

ಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರಲಿದೆ. ಸಮ್ಮಿಶ್ರ ಸರ್ಕಾರ ಅಧಿಕಾರ‌ ಮಾಡುವುದಿಲ್ಲ. ಕೊರೊನಾ ಮತ್ತೆ ತಲೆಯೆತ್ತಿದರೂ ಅಂತಹ ಸಮಸ್ಯೆಗಳು ಬರುವುದಿಲ್ಲ. ಸಂಕ್ರಾಂತಿ- ಯುಗಾದಿಯ ಬಳಿಕ ಮತ್ತೆ ಕಳೆದ ಬಾರಿಯ ಮಾದರಿಯಲ್ಲೇ ಮಳೆಯಾಗಲಿದೆ ಎಂದು ಶ್ರೀಗಳು ನುಡಿದಿದ್ದಾರೆ.

Home add -Advt

ಮಾಜಿ ಶಾಸಕ ಸಂಜಯ ಪಾಟೀಲ ಇಷ್ಟೊಂದು ವಿಚಲಿತರಾಗೋಕೆ ಕಾರಣ ಏನು?

https://pragati.taskdun.com/what-is-the-reason-why-sanjay-patil-is-so-disturbed/

‘ಭಾರತ್ ಮಾತಾ ಕೀ ಜೈ..’ ಎಂದು ಕೂಗಿದ ಮಾತ್ರಕ್ಕೆ ದೇಶಭಕ್ತಿಯಾಗದು

https://pragati.taskdun.com/just-shouting-bharat-mata-ki-jai-is-not-patriotism/

ಬದಲಾಗಿದೆ SSLC ಪರೀಕ್ಷಾ ಮಂಡಳಿ ವೆಬ್ ಸೈಟ್ ವಿಳಾಸ

https://pragati.taskdun.com/sslc-exam-board-website-address-changed/

Related Articles

Back to top button