Kannada NewsKarnataka News

ಕಟಕೋಳ: ರೈತನ ಕೊಲೆ ಮಾಡಿ ಅಪಘಾತದ ನಾಟಕವಾಡಿದ ದುಷ್ಕರ್ಮಿಗಳು?

ಪ್ರಗತಿ ವಾಹಿನಿ, ರಾಮದುರ್ಗ :  
 ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ, ಬಳಿಕ ರಸ್ತೆ ಅಪಘಾತದಂತೆ ತೋರಿಸಲು ಪ್ರಯತ್ನಿಸಿದ ಶಂಕೆ ವ್ಯಕ್ತವಾಗಿದೆ.
    ರಾಮದುರ್ಗ ತಾಲೂಕಿನ ಪಾಂಡಪ್ಪ ದುಂಡಪ್ಪ ಜಟಗನ್ನವರ್ ( 35) ಮೃತಪಟ್ಟಿರುವ ರೈತ.
ಪಾಂಡಪ್ಪನನ್ನು ಯಾರೋ ದುಷ್ಕರ್ಮಿಗಳು ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ಮಧ್ಯದಲ್ಲಿ ತಲೆಗೆ ಹೊಡೆದು ಕೊಲೆ ಮಾಡಿ, ಬಳಿಕ ರಸ್ತೆ ಅಪಘಾತದಂತೆ ಕಾಣುವ ಸಲುವಾಗಿ ಕಂಬಳಿಯಲ್ಲಿ ಸುತ್ತಿ ತಂದು ಬೈಕ್ ಸಮೇತ ರಸ್ತೆಯಲ್ಲಿ ಎಸೆದು ಹೋಗಿದ್ದಾರೆ ಎಂದು ಮೃತ ಪಾಂಡಪ್ಪ ಅವರ ತಂದೆ ದುಂಡಪ್ಪ ದೂರು ನೀಡಿದ್ದಾರೆ.
  ಸಿಪಿಐ ಪಟ್ಟಣಶೆಟ್ಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

https://pragati.taskdun.com/latest/belagaviwomanmissing/

Home add -Advt

Related Articles

Back to top button