Cancer Hospital 2
Bottom Add. 3

*ಬಾಯಿ ಕ್ಯಾನ್ಸರ್ ತಡೆಗಟ್ಟಬೇಕಾದ ಜವಾಬ್ದಾರಿ ದಂತ ವೈದ್ಯರ ಮೇಲಿದೆ: ಸಚಿವ ಡಾ.ಶರಣಪ್ರಕಾಶ ಪಾಟೀಲ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಮ್ಮ ದೇಶವು ಬಾಯಿ ಕ್ಯಾನ್ಸರ್ ಸಮಸ್ಯೆ ಎದುರಿಸುತ್ತಿದ್ದು, ಸಾಕಷ್ಟು ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸಿದರೂ ಗ್ರಾಮೀಣ ಭಾಗದಲ್ಲಿ ರೋಗಪತ್ತೆ ವಿಳಂಭವಾಗುತ್ತಿದೆ. ಅದನ್ನು ತಪ್ಪಿಸಿ ಸರಿಯಾದ ಮಾರ್ಗದಲ್ಲಿ ರೋಗಪತ್ತೆ ಮಾಡಿ ಶೀಘ್ರ ಚಿಕಿತ್ಸೆ ನೀಡಿ ಬಾಯಿ ಕ್ಯಾನ್ಸರ್ ತಡೆಗಟ್ಟಬೇಕಾದ ಜವಾಬ್ದಾರಿ ದಂತ ವೈದ್ಯರ ಮೇಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ಕಾಹೆರನ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯದ ಓರಲ್ ಪೆಥಾಲಜಿ ಮತ್ತು ಮೈಕ್ರೋಬಯಾಲಜಿ ವಿಭಾಗವು ಏರ್ಪಡಿಸಿರುವ ಇಂಡಿಯನ್ ಅಸೋಸಿಯೇಶನ್ ಆಫ್ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಪೆಥಾಲಜಿಸ್ಥಗಳ ( ದಂತ ವೈದ್ಯರ) 30 ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲಿಕೆ ಮತ್ತು ಚಿಕಿತ್ಸೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು, ಬಾಯಿ ಆರೋಗ್ಯ ಕಾಪಾಡುವಲ್ಲಿ ಪರಿಣಾಮಕಾರಿಯಾದ ಕ್ರಮಕ್ಕೆ ಮುಂದಾಗಿ. ಸಮಾಜಕ್ಕೆ ದಂತ ವೈದ್ಯರ ಕೊಡುಗೆ ಅತ್ಯಧಿಕವಾಗಿದ್ದು ಬಾಯಿ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಶೀಘ್ರ ಮತ್ತು ಮೊದಲ ಚಿಕಿತ್ಸೆ ಅವಶ್ಯ ಎಂದು ತಿಳಿಸಿದರು.

ಕೆಎಲ್ಇ ಸಂಸ್ಥೆಯು ಸರಕಾರದ ಮಾಡದ ಕಾರ್ಯವನ್ಬು ಮಾಡುತ್ತಿದೆ. ಡಾ. ಪ್ರಭಾಕರ ಕೋರೆ ಅರ್ಪಣಾ ಮನೋಭಾವದಿಂದ ಇಂದು ಸಂಸ್ಥೆ ಯು ವಿಶ್ವಮಟ್ಟಕ್ಕೆ ಬೆಳೆದಿದೆ. ಅದರಲ್ಲಿಯೂ ಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. ಆದ್ದರಿಂದ ದಂತಮಹಾವಿದ್ಯಾಲವು ಈ ಭಾಗದಲ್ಲಿ ಬಾಯಿ ಆರೋಗ್ಯ ಮತ್ತು ಕ್ಯಾನ್ಸರ್ ತಡೆಗಟ್ಟಲು ಪರಿಣಾಮ ಕಾರಿಯಾದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

ರಾಜ್ಯದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಇಂದು ಗದಗನಲ್ಲಿ ೪೦೦ ಹಾಸಿಗೆಗಳ ಆಸ್ಪತ್ರೆಯನ್ನು ಜನಸೇವೆಗೆ ಅರ್ಪಿಸಲಾಗಿದೆ ಎಂದ ಅವರು ರಾಜ್ಯವು ಸುವರ್ಣ ಸಂಭ್ರದಲ್ಲಿದ್ದು, ಆರೋಗ್ಯ ಕ್ಷೇತ್ರಕ್ಕೆ ಅತ್ಯಾಧುನಿಕ ಸ್ಪರ್ಶ ನೀಡಲಾಗುತ್ತಿದೆ ಎಂದು ಹೇಳಿದರು.

ಕಾಹೇರ ಉಪಕುಲಪತಿ ಡಾ. ನಿತಿನ ಗಂಗಾನೆ ಅವರು ಮಾತನಾಡಿ ಬಾಯಿ ಆರೋಗ್ಯ ರಕ್ಷಣೆಗಾಗಿ ಉದ್ದೇಶಿತ ಚಿಕಿತ್ಸೆಯನ್ನು ಒದಗಿಸಲು ಅನುಕೂಲ ಕಲ್ಪಿಸುವ ಹಾಗೂ ರೋಗ, ರೋಗ ನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾದ ಪ್ರಗತಿಯನ್ನು ಕಲ್ಪಿಸುವ ಜೀನೋಮಿಕ್ಸ್, ಪ್ರೋಟಿಯೊಮಿಕ್ಸ್ ಸೇರಿದಂತೆ ವಿವಿಧ ಸಂಶೋಧನಾ ಕ್ಷೇತ್ರಗಳ ಶಕ್ತಿಯನ್ನು ನಾವು ತಲುಪಬೇಕಾಗಿದೆ ಎಂದು ಹೇಳಿದರು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಡಾ. ವಿ. ಐ. ಪಾಟೀಲ್, ಐಎಒಎಂಪಿ ಅಧ್ಯಕ್ಷ ಡಾ. ಚೈತನ್ಯಬಾಬು ಅವರು ಮಾತನಾಡಿದರು. ಕಾರ್ಯದರ್ಶಿ ಡಾ ನದೀಮ ಜೆಡ್ಡಿ ಸಂಸ್ಥೆಯ ಚಟುವಟಿಕೆಗಳ ಕುರಿತು ವಿವರಿಸಿದರು.

ಸಮ್ಮೇಳನದಲ್ಲಿ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಅಲ್ಕಾ ಕಾಳೆ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯಾದ ಡಾ. ಎನ್ ಎಸ್ ಮಹಾಂತಶೆಟ್ಟಿ,ಡಾ. ವಿ ಡಿ ಪಾಟೀಲ, ಕಾಹೆರ ಕುಲಸಚಿವ ಡಾ. ಎಂ ಎಸ್ ಗಣಾಚಾರಿ, ಡಾ. ನಂದನ, ಡಾ. ಎನ್ ಮಾಲತಿ ಸಮ್ಮೇಳನದ ಸಂಘಟನಾ ಅಧ್ಯಕ್ಷೆ ಡಾ.ಸೀಮಾ ಹಳ್ಳಿಕೇರಿಮಠ, ಸಂಘಟನಾ ಕಾರ್ಯದರ್ಶಿ ಡಾ.ಪುಣ್ಯ ಅಂಗಡಿ, ಖಜಾಂಚಿ ಡಾ.ವೀಣಾ ನಾಯ್ಕ್ ಡಾ. ದೀಪಾ ಮಾನೆ ಮತ್ತು ಡಾ. ಪುಷ್ಪಕ ಶಾ. ಸಂಘಟನಾ ತಂಡದ ಇತರ ಸದಸ್ಯರು ಡಾ. ಶ್ವೇತಾ ಖುಂಬೋಜಕರ್, ಡಾ. ಮಂಜುಳಾ ಮತ್ತು ಡಾ. ಚೇತನ್ ಬೆಳಲ್ದಾವರ ಸೇರಿದಂತೆ ಮುಂತಾದವರು ಉಪಸ್ಥಿರಿದ್ದರು. ಸಮ್ಮೇಳನದಲ್ಲಿ 600ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. ದೇಶದ ವಿವಿಧ ಭಾಗಗಳ, ನೇಪಾಳ, ಶಾರ್ಜಾ ಮತ್ತು ಮಲೇಷ್ಯಾದಿಂದ ಅಂತಾರಾಷ್ಟ್ರೀಯ ಪ್ರತಿನಿಧಿಗಳ ಆಗಮಿಸಿದ್ದರು.

ಸಮಾವೇಶದ ಮುಖ್ಯ ಭಾಷಣಕಾರರಾಗಿ ಜಪಾನ್‌ನ ಡಾ. ಯೂಚಿ ತನಕಾ, ಅಮೇರಿಕೆಯ ಡಾ. ಪ್ರವೀಣ್ ಆರಾನಿ, ಮಸ್ಕತ್‌ನ ಡಾ. ಸಂಜಯ್ ಸರಾಫ್, ನಾಗಪೂರನ ಡಾ. ಸುಚಿತ್ರಾ ಗೋಸಾವಿ, ಕೋಲ್ಕತ್ತಾದ ಡಾ ಜಯಗೋಪಾಲ್ ರೇ, ಬೆಂಗಳೂರಿನ ಡಾ ಕವಿತಾ ರಾವ್, ದೆಹಲಿಯ ಡಾ ಪುನೀತ್ ಅಹುಜಾ, ಓರಿಸ್ಸಾದ ಡಾ ಜಗದೀಶ್ ರಾಜಗುರು, ಮಧುರೈನ ಡಾ ನಾರಾಯಣ ಗುರುರಾಜ್ ಹಾಗೂ ಡಾ ಎನ್. ಗೋವಿಂದರಾಜ್ ಕುಮಾರ್ ಅವರು ಆಗಮಿಸಿದ್ದಾರೆ.

ಸಮಾವೇಶದಲ್ಲಿ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಬಾಯಿಯ ಕ್ಯಾನ್ಸರ್, ತಂಬಾಕು ಸಂಬಂಧಿತ ಬಾಯಿಯ ರೋಗಗಳು ಮತ್ತು ತಲೆ ಮತ್ತು ಕತ್ತಿನ ರೋಗಶಾಸ್ತ್ರದ ವಿಷಯಗಳ ಕುರಿತು ಭಾಷಣ, ವಿಚಾರ ಸಂಕಿರಣ, ವೈಜ್ಞಾನಿಕ ಪ್ರಬಂಧ, ಚರ್ಚೆ ನಡೆಯಲಿವೆ.

Bottom Add3
Bottom Ad 2

You cannot copy content of this page