ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಒಟ್ಟೂ 66 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಹಾಸನ 21, ಮಂಡ್ಯದಲ್ಲಿ 8, ಬೆಂಗಳೂರು 4, ಕಲಬುರಗಿ 7, ಬೀದರ್ 10, ಉತ್ತರ ಕನ್ನಡ 1, ದಕ್ಷಿಣ ಕನ್ನಡ 1, ತುಮಕೂರು 4, ಯಾದಗಿರಿ 1, ರಾಯಚೂರು 4 ಪ್ರಕರಣ ಪತ್ತೆಯಾಗಿದೆ.
ವಿಪರ್ಯಾಸವೆಂದರೆ 66 ಜನರಲ್ಲಿ 47 ಜನರು ಮುಂಬೈಯಿಂದ ಮತ್ತು ಐವರು ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಸೇರಿ 52 ಜನರು ಮಹಾರಾಷ್ಟ್ರದಿಂದ ಬಂದವರು. ಹಾಸನದಲ್ಲಿ ಪತ್ತೆಯಾದ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ ಮುಂಬೈಯಿಂದ ಬಂದವರು.
ಬೆಂಗಲೂರಿನಲ್ಲಿ ಪತ್ತೆಯಾಗಿರುವ ಇಬ್ಬರಿಗೆ ಸೋಂಕಿನ ಮೂಲ ಗೊತ್ತಾಗಿಲ್ಲ. ಆರೋಗ್ಯ ಇಲಾಖೆ ಅದನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದೆ.
ಇಂದು ಹೊಸದಾಗಿ ರಾಜ್ಯದಲ್ಲಿ 350 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರು ಒಂದರಲ್ಲೇ 100 ಜನರು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗಾವಿಯಲ್ಲಿ ಒಬ್ಬರು, ಬಾಗಲಕೋಟೆಯಲ್ಲಿ 12, ಬೆಂಗಳೂರು ಗ್ರಾಮಾಂತರದಲ್ಲಿ 17, ಬೆಂಗಳೂರು ನಗರದಲ್ಲಿ 48, ಬೀದರ್ 10, ಚಾಮರಾಜನಗರ 1, ಚಿಕ್ಕಮಗಳೂರು 15, ದಕ್ಷಿಣಕನ್ನಡ 13, ದಾವಣಗೆರೆ 25, ಗದಗ 3, ಹಾಸನ 32, ಕಲಬುರಗಿ 12, ಕೊಡಗು 49, ಕೊಪ್ಪಳ 5, ಮಂಡ್ಯ 8, ರಾಯಚೂರು 2, ರಾಮನಗರ 1, ಶಿವಮೊಗ್ಗ 7, ತುಮಕೂರು 23, ಉಡುಪಿ 16, ಉತ್ತರ ಕನ್ನಡ 14, ಯಾದಗಿರಿ 1, ಬಿಬಿಎಂಪಿ 35 ಜನರು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದೇ ವೇಳೆ ಇಂದು 232 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 864 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ