Kannada NewsKarnataka NewsLatest

*ಬೆಳಗಾವಿಗೆ 377 ಕೋಟಿ ರೂ ಯೋಜನೆ*; *ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್* : *ಸಂಪುಟ ಅನುಮೋದನೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : 75,938 ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ಒದಗಿಸಲು ಸಚಿವಸಂಪುಟ ಸಭೆ ಒಪ್ಪಿಗೆ ನೀಡಿದೆ.

ಪೋಷಣ್ ಅಭಿಯಾನ ಯೋಜನೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಫಲಾನುಭವಿಗಳ ಗುರಿಯನ್ನಾಧರಿಸಿ ಎಲ್ಲ ಪೌಷ್ಟಿಕತೆಯ ಯೋಜನೆಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಮುಂದಿನ 3 ವರ್ಷಗಳಲ್ಲಿ 0-6 ವರ್ಷದ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಠಿಕತೆಯ ಸ್ಥಿತಿಯನ್ನು ನಿರ್ಧಿಷ್ಟ ಅವಧಿಗೆ ಸುಧಾರಿಸಲು ಕೈಗೊಂಡ ಪೋಷ್ ಟ್ರ್ಯಾಕರ್ ನಲ್ಲಿ ಅಳವಡಿಸಲು Smartphone ಖರೀದಿಸಲು ಪ್ರಸ್ತಾಪಿಸಲಾಗಿದೆ.

ಅದಕ್ಕಾಗಿ 75,938 Smartphone ಗಳನ್ನು 89.61 ಕೋಟಿ ವೆಚ್ಚದಲ್ಲಿ GeM Portal ಮೂಲಕ ಖರೀದಿಸಲು ಟೆಂಡ‌ರ್ ಕರೆದು ಖರೀದಿಸಲು ಉದ್ದೇಶಿಸಲಾಗಿದೆ.

ಕುಡಿಯುವ ನೀರು ಯೋಜನೆ

1. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಪಾಚ್ಛಾಪುರ ಹಾಗೂ ಇತರೆ 18 ಗ್ರಾಮಗಳಿಗೆ (28 ಜನವಸತಿಗಳು) ಹಾಗೂ ಗೋಕಾಕ ತಾಲ್ಲೂಕಿನ ಕುಂದರಗಿ ಹಾಗೂ ಇತರೆ 21 ಗ್ರಾಮಗಳಿಗೆ (26 ಜನವಸತಿಗಳು) DBOT ಆಧಾರದ ಮೇಲೆ ಒಟ್ಟು ಮೊತ್ತ ರೂ.92.00 ಕೋಟಿಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

2. ಜಲ ಜೀವನ್ ಮಿಷನ್ ಯೋಜನೆಯನ್ನು ಸಂಯೋಜಿತಗೊಳಿಸಿ ಮತ್ತು ಕೇಂದ್ರ ಸರ್ಕಾರದ ಅನುದಾನ ರೂ.38.32 ಕೋಟಿ ಗಳನ್ನು ಬಳಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸುವುದು;

3. ರಾಜ್ಯ ಸರ್ಕಾರದ 53.68 ಕೋಟಿಗಳ ಅನುದಾನ ಹಂಚಿಕೆ ಹಾಗೂ ಯೋಜನೆಯ 5 ವರ್ಷಗಳ ಅನುಷ್ಠಾನ ಹಾಗೂ ಕಾರ್ಯಾಚರಣೆ ನಿರ್ವಹಣೆಗೆ ನೀಡಲು ಸಚಿವ ಸಂಪುಟ ಅನುಮೋದಿಸಿದೆ.

1. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ದಡ್ಡಿ ಹಾಗೂ ಇತರೆ 81 ಗ್ರಾಮಗಳಿಗೆ (121 ಜನವಸತಿಗಳು)

ಮತ್ತು ಬೆಳಗಾವಿ ತಾಲ್ಲೂಕಿನ 1 ಗ್ರಾಮಕ್ಕೆ (1 ಜನವಸತಿ) ಗೆ DBOT ಆಧಾರದ ಮೇಲೆ ಒಟ್ಟು ಮೊತ್ತ 285.00 ಕೋಟಿಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಜೀವನ್ ಯೋಜನೆಯೊಂದಿಗೆ ಸಂಯೋಜಿತಗೊಳಿಸಿ ಮಿಷನ್ ಕೇಂದ್ರ ಸರ್ಕಾರದ ಅನುದಾನ ರೂ.122.84 ಕೋಟಿಗಳನ್ನು ಬಳಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ.

3. ರಾಜ್ಯ ಸರ್ಕಾರದ162.16 ಕೋಟಿಗಳ ಅನುದಾನ ಯೋಜನೆಯ ಹಂಚಿಕೆಯೊಂದಿಗೆ ಅನುಷ್ಠಾನ ಹಾಗೂ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಅನುಮೋದನೆ ನೀಡಲು ಸಚಿವ ಸಂಪುಟ ಅನುಮೋದಿಸಿದೆ.

ಸಚಿವಸಂಪುಟ ಸಭೆಯ ನಿರ್ಣಯಗಳ ಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ –

https://mail.google.com/mail/u/0?ui=2&ik=8ea932610f&attid=0.1&permmsgid=msg-a:r-7587714629328511170&th=18d897269e4f9d28&view=att&disp=inline&realattid=18d896d764da4ad57881

Related Articles

Back to top button