Kannada NewsKarnataka NewsLatest

*ಮಾವನ ಜೊತೆ 3 ಬಾರಿ ಮದುವೆ; ವಿವಾಹವಾದ ಮೂರನೇ ದಿನಕ್ಕೆ ಪ್ರಿಯಕರನೊಂದಿಗೆ ಪರಾರಿ*

ಪ್ರಗತಿವಾಹಿನಿ ಸುದ್ದಿ: ಇಲ್ಲೋರ್ವ ಯುವತಿ ಸ್ವಂತ ಮಾವನನ್ನೇ ಮೂರು ಬಾರಿ ಮದುವೆಯಾಗಿ ಬಳಿಕ ಮದುವೆಯಾದ ಮೂರೇ ದಿನಕ್ಕೆ ಗಂಡನನ್ನು ಬಿಟ್ಟು ಪ್ರಿಯರಕರನ ಜೊತೆ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.

Home add -Advt

ಬೆಂಗಳೂರಿನ ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ದೊಡ್ಡಕಲ್ಲಸಂದ್ರ ನಿವಾಸಿ ಮಂಜುನಾಥ್ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ನ್ಯಾಯ ಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಂಜುನಾಥ್ ತನ್ನ ಅಕ್ಕನ ಮಗಳು ಮನುಜಾಳನ್ನು 7 ವರ್ಷಗಳ ಕಾಲ ಪ್ರೀತಿಸಿದ್ದ. ಸಂಬಂಧಿಕರೇ ಆಗಿದ್ದರೂ ಇವರಿಬ್ಬರ ಮದುವೆಗೆ ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಇರಲಿಲ್ಲ. ಮನೆಯಲ್ಲಿ ಒಪ್ಪಿಲ್ಲ ಎಂದು ಮಂಜುನಾಥ್ ಹಾಗೂ ಮನುಜಾ ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದಾರೆ. ಓಡಿ ಹೋಗಿ ಮದುವೆಯಾದರೆಂದು ಇಬ್ಬರನ್ನೂ ಮನೆಗೆ ಕರೆಸಿದ ಕುಟುಂಬದವರು ತಾವೇ ಮುಂದೆ ನಿಂತು ಮದುವೆ ಮಾಡ್ತೀವಿ ಎಂದು ನಂಬಿಸಿದ್ದಾರೆ. ಆದರೆ 2 ವರ್ಷ ಕಳೆದರೂ ಮದುವೆ ಮಾತುಕತೆಯೇ ಇಲ್ಲ. ಇದರಿಂದ ಬೇಸತ್ತ ಇಬ್ಬರೂ ಮತ್ತೆ ಓಡಿ ಹೋಗಿ ಮತ್ತೆ ಮದುವೆಯಾಗಿದ್ದಾರೆ. ಇಬ್ಬರ ಮದುವೆ ವಿಚಾರವಾಗಿ ತಘಟ್ಟಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಆಗ ಮನುಜಾ ತಾನು ಗಂಡನ ಜೊತೆ ಹೋಗೋದಾಗಿ ಬರೆದುಕೊಟ್ಟಿದ್ದಾಳೆ.

ಬಳಿಕ ಒಂದೆರಡು ದಿನ ತವರಲ್ಲಿದ್ದ ಮನುಜಾಳನ್ನು ಮಂಜುನಾಥ್ ನೆ ಹೋಗಿ ಕರೆತಂದಿದ್ದಾನೆ. ಸಂಪ್ರದಾಯದಂತೆ ಮತ್ತೆ ಇಬ್ಬರ ಮದುವೆಯೂ ಆಗಿದೆ. ಹೀಗೆ ಮದುವೆಯಾದ ಮೂರು ದಿನದ ಬಳಿಕ ಈಗ ಮನುಜಾ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.

7 ವರ್ಷಗಳ ಕಾಲ ಮಾನವ ಜೊತೆಯೇ ಲವ್. ಮಾವನನ್ನೇ ಮೂರು ಬಾರಿ ಮದುವೆಯಾಗಿ ಈಗ ಮದುವೆಯಾದ ಮೂರೇ ದಿನಕ್ಕೆ ಮಾವನನ್ನು ಬಿಟ್ಟು ಇನ್ನೋರ್ವನ ಜೊತೆ ಯುವತಿ ಪರಾರಿಯಾಗಿದ್ದಾಳೆ. ಪತ್ನಿ ಎಲ್ಲಿಹೋದಳೆಂದು ಮಂಜುನಾಥ್ ಹುಡುಕಿದರೆ ಆಕೆಗೆ ಇನ್ನೋರ್ವ ಪ್ರಿಯಕರನಿರುವುದು ಹಾಗೂ ಆತನೊಂದಿಗೆ ಆಕೆ ತವರು ಸೇರಿದ್ದಾಳೆ ಎಂಬುದು ಗೊತ್ತಾಗಿದೆ.

ಇದರಿಂದ ನೊಂದ ಮಂಜುನಾಥ್ ತನಗಾಗಿರುವ ಮೋಸಕ್ಕೆ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಮಂಜುನಾಥ್ ಕುಟುಂಬವು ತಮಗೆ ಈರೀತಿ ಮೋಸ ಮಾಡುವ ಹೆಣ್ಣು ಬೇಡ ಆಕೆ ಬೇರೆಯವರಿಗೂ ಹೀಗೆ ಮಾಡಬಾರದು ಆಕೆಗೆ ಕಠಿಣ ಶಿಕ್ಷೆ ನೀಡುವಂತೆ ದೂರು ನೀಡಿದ್ದಾರೆ.


Related Articles

Back to top button