ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮತದಾನದ ಹಕ್ಕು ಹೊಂದಿರುವ ಮಹಿಳೆಯರ ಸಂಖ್ಯೆಯೇ ಪುರುಷರಿಗಿಂತ ಅಧಿಕವಾಗಿದೆ.
ಹುಕ್ಕೇರಿ, ಗೋಕಾಕ, ಯಮಕನಮರಡಿ, ಬೆಳಗಾವಿ ಉತ್ತರ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪ್ರಾಬಲ್ಯ. ಹುಕ್ಕೇರಿ ಕ್ಷೇತ್ರದಲ್ಲಿ 99,492 ಪುರುಷರು ಹಾಗೂ 99,607 ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ. ಅಂದರೆ, ಪ್ರತಿ ಒಂದು ಸಾವಿರ ಪುರುಷರಿಗೆ 1001 ಮಹಿಳೆಯರಿದ್ದಾರೆ.
ಗೋಕಾಕಲ್ಲಿ 1,22,245 ಪುರುಷರು ಹಾಗೂ 1,25,392 ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ. 1000 ಪುರುಷರಿಗೆ 1026 ಮಹಿಳೆಯರಿದ್ದಾರೆ.
ಯಮಕನಮರಡಿಯಲ್ಲಿ 96,749 ಪುರುಷರು ಹಾಗೂ 97,122 ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ. ಸಾವಿರ ಪುರುಷರಿಗೆ 1004 ಮಹಿಳೆಯರಿದ್ದಾರೆ.
ಬೆಳಗಾವಿ ಉತ್ತರದಲ್ಲಿ 1,20,923 ಪುರುಷರು ಹಾಗೂ 1,22,919 ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ. ಇಲ್ಲಿ ಸಾವಿರ ಪುರುಷರಿಗೆ 1017 ಮಹಿಳೆಯರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟೂ 38,33,037 ಜನ ಮತದಾನದ ಹಕ್ಕು ಹೊಂದಿದ್ದು, 4434 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ