
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಮುಖ ಹಿಂದೂ ಮುಖಂಡರನ್ನು ಕೊಲ್ಲಲು ಸಂಚು ರೂಪಿಸಲಾಗಿದೆಯೇ ಎಂಬ ಅನುಮಾನಕ್ಕೆ ಪುಷ್ಠಿ ನೀಡುವಂತಹ ಸುದ್ದಿ ಹೊರಬಿದ್ದಿದೆ. ರಾಜ್ಯದ ನಾಲ್ವರು ಹಿಂದೂ ಮುಖಂಡರ ಹತ್ಯೆಗೆ ದುಷ್ಕರ್ಮಿಗಳು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ವರದಿ ಬಹಿರಂಗಪಡಿಸಿದೆ.
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಮತ್ತಷ್ಟು ಹಿಂದು ಮುಖಂಡರ ಹತ್ಯೆಗೆ ದುಷ್ಕರ್ಮಿಗಳು ಪ್ಲಾನ್ ಮಾಡಿಕೊಂಡಿದ್ದು, ನಾಲ್ವರು ಪ್ರಮುಖವಾಗಿ ಹಿಟ್ ಲಿಸ್ಟ್ ನಲ್ಲಿರುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.
ಓರ್ವ ಸಂಸದ, ತೇಜಸ್ ಗೌಡ ಸೇರಿದಂತೆ ನಾಲ್ವರು ಪ್ರಮುಖ ಹಿಂದು ಮುಖಂಡರ ಹೆಸರು ಹಿಟ್ ಲಿಸ್ಟ್ ನಲ್ಲಿದೆ. ಗುಪ್ತಚರ ಇಲಾಖೆ ಸೂಚನೆ ಮೇರೆಗೆ ಇದೀಗ ನಾಲ್ವರು ಮುಖಂಡರಿಗೂ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಸಚಿವ ಈಶ್ವರಪ್ಪಗೆ ಜೆ.ಪಿ.ನಡ್ಡಾ ಛೀಮಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ