Latest

ರಾಜ್ಯದಲ್ಲಿಂದು 445 ಜನರಿಗೆ ಕೊರೋನಾ ಸೋಂಕು; 10 ಜನರ ಸಾವು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕದಲ್ಲಿ ಇಂದು ಒಟ್ಟೂ 445 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 10 ಜನರು ಸಾವಿಗೀಡಾಗಿದ್ದಾರೆ.

ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 11,005.  ಒಟ್ಟೂ ಸಾವಿಗಾಡಾದವರ ಸಂಖ್ಯೆ 180.

Home add -Advt

ಇಂದು ಬೆಂಗಳೂರಿನಲ್ಲಿ 144 ಜನರಿಗೆ ಸೋಂಕು ತಗುಲಿದೆ. ಬಳ್ಳಾರಿಯಲ್ಲಿ 47, ಕಲಬುರಗಿಯಲ್ಲಿ 42, ಕೊಪ್ಪಳದಲ್ಲಿ 36, ದಕ್ಷಿಣಕನ್ನಡದಲ್ಲಿ 33,  ಧಾರವಾಡದಲ್ಲಿ 30 ಜನರಿಗೆ ಸೋಂಕು ತಗುಲಿದೆ. ರಾಯಚೂರು 14, ಗದಗ 12, ಚಾಮರಾಜ ನಗರ 11, ಉಡುಪಿ 9, ಯಾದಗಿರಿ 7, ಮಂಡ್ಯ, ಉತ್ತರಕನ್ನಡ, ಬಾಗಲಕೋಟೆ, ಶಿವಮೊಗ್ಗ, ಕೋಲಾರಗಳಲ್ಲಿ ತಲಾ 6, ಮೈಸೂರಿನಲ್ಲಿ 5, ಚಿಕ್ಕಮಗಳೂರು, ಕೊಡಗು ತಲಾ 4, ಹಾಸನ, ಬೆಂಗಳೂರು ಗ್ರಾಮಾಂತರ 3, ವಿಜಯಪುರ, ತುಮಕೂರು ಹಾವೇರಿ ತಲಾ 2, ಬೀದರ್, ಬೆಳಗಾವಿ, ರಾಮನಗರ, ದಾವಣಗೆರೆ, ಚಿತ್ರದುರ್ಗ ತಲಾ 1 ಪ್ರಕರಣ ಪತ್ತೆಯಾಗಿದೆ.

ಇಂದು ಒಟ್ಟೂ 246 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟೂ 6916 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನೂ 3905 ಜನರಿಗೆ ಕೊರೋನಾ ಕ್ರಿಯಾಶೀಲವಾಗಿದೆ.

Related Articles

Back to top button