Kannada NewsKarnataka NewsLatest

ಹುರಕಡ್ಲಿ ಅಜ್ಜನವರ ಪುಣ್ಯಾಶ್ರಮ ಅಭಿವೃದ್ಧಿಗೆ 5 ಕೋಟಿ ರೂ. ಯೋಜನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ

ಪ್ರಗತಿವಾಹಿನಿ ಸುದ್ದಿ, ನವಲಗುಂದ : ಇಲ್ಲಿಯ ಹುರಕಡ್ಲಿ ಅಜ್ಜನವರ ಪುಣ್ಯಾಶ್ರಮ ಅಭಿವೃದ್ಧಿಗೆ 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿಕೊಟ್ಟರೆ ಮುಖ್ಯಮಂತ್ರಿಗಳಿಂದ ಅನುಮೋದನೆ ಕೊಡಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.

ಮಂಗಳವಾರ ಹುರಕಡ್ಲಿ ಅಜ್ಜನವರ 34ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಾಸಕ ಕೋನರಡ್ಡಿಯವರು ಪುಣ್ಯಾಶ್ರಮ ಅಭಿವೃದ್ದಿ ಯೋಜನೆ ಸಿದ್ಧಪಡಿಸಿದರೆ ಖಂಡಿತ ನಾವೆಲ್ಲ ಸೇರಿ ಆ ಕಾರ್ಯವನ್ನು ನೆರವೇರಿಸುತ್ತೇವೆ. ಅಜ್ಜನವರು ನನ್ನಿಂದ ಈ ಕಾರ್ಯ ಆಗಬೇಕೆಂದು ಬಯಸಿದರೆ ಅದು ಖಂಡಿತ ನೆರವೇರುತ್ತದೆ. 5 ಕೋಟಿ ರೂ. ಮಿತಿಯಲ್ಲಿ ಖಂಡಿತ ಪುಣ್ಯಾಶ್ರಮ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಹುರಕಡ್ಲಿ ಅಜ್ಜನವರು ಸದಾ ದೇವಿಯ ಪಾರಾಯಣ ಮಾಡುತ್ತಿದ್ದರು. ದೇವಿ ಅವರಿಗೆ ಒಲಿದಿದ್ದಳು. ಯಾವ ಭೇದವಿಲ್ಲದೆ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ಅವರು ನೋಡುತ್ತಿದ್ದರು. ನಮ್ಮ ಕುಟುಂಬದವರು ಈ ಪುಣ್ಯಾಶ್ರಮಕ್ಕೆ ಸದಾ ನಡೆದುಕೊಳ್ಳುತ್ತೇವೆ.  ಈ ಪುಣ್ಯ ಭೂಮಿಯಲ್ಲಿರುವ ಇಲ್ಲಿಯ ಜನರು ಭಾಗ್ಯವಂತರು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಡಾ.ನೀಲಮ್ಮ ತಾಯಿ ಅಸುಂಡಿ ಸಾನ್ನಿಧ್ಯವಹಿಸಿದ್ದರು. ಶಾಸಕ ಎನ್.ಎಚ್.ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸದಾನಂದ ಡಂಗನವರ್, ಬಿ.ಎಂ.ಹುರಕಡ್ಲಿ, ಎಂ.ಎಸ್.ಶಿರಿಯಣ್ಣವರ್, ಎ.ಎಸ್.ಬಾಗಿ ಮೊದಲಾದವರು ಇದ್ದರು. 

Related Articles

Back to top button