Uncategorized
*5 ರಾಜ್ಯಗಳಿಗೆ BJP ನೂತನ ಅಧ್ಯಕ್ಷರ ನೇಮಕ; ಆಂಧ್ರ ಘಟಕಕ್ಕೆ ಮಾಜಿ ಸಿಎಂ ಎನ್ ಟಿ ಆರ್ ಪುತ್ರಿಗೆ ಪಟ್ಟ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಐದು ರಾಜ್ಯಗಳಿಗೆ ಬಿಜೆಪಿ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಷ್ತ್ರಾಧ್ಯಕ್ಷ ಜೆ.ಪಿ.ನಡ್ಡಾ ಆದೇಶ ಹೊರಡಿಸಿದ್ದಾರೆ.
ತೆಲಂಗಾಣ, ಆಂಧ್ರ ಪ್ರದೇಶ, ಪಂಜಾಬ್ ಸೇರಿದಂತೆ 5 ರಾಜ್ಯಗಳ ಬಿಜೆಪಿ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಆಂಧ್ರ ಬಿಜೆಪಿ ಘಟಕಕ್ಕೆ ಮಾಜಿ ಸಿಎಂ ಎನ್ ಟಿ ಆರ್ ಪುತ್ರಿ ಪುರಂದರೇಶ್ವರಿ ಅವರನ್ನು ನೇಮಕ ಮಾದಿರುವುದು ವಿಶೇಷ.
ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷರಾಗಿ ಕಿಶನ್ ರೆಡ್ಡಿ, ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷರಾಗಿ ಪುರಂದರೇಶ್ವರಿ, ಜಾರ್ಖಂಡ್ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಾಬುಲಾಲ್ ಮುರೂಡಿ, ಪಂಜಾಬ್ ಬಿಜೆಪಿ ಘಟಕದ ಅಧ್ಯಕ್ಷರಾಗಿ ಸುನೀಲ್ ಜಾಖರ್, ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷರಾಗಿ ಗಜೇಂದ್ರ ಸಿಂಗ್ ಅವರನ್ನು ನೇಮಕಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ