VTU Add
Beereshwara 36
LaxmiTai 5

*ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದಲ್ಲಿ ವೈದಿಕ ಸಮಾವೇಶ*

Anvekar 3

ಪ್ರಗತಿವಾಹಿನಿ ಸುದ್ದಿ; ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದಲ್ಲಿ ಒಂದು ದಿನದ ವೈದಿಕ ಸಮಾವೇಶ ಮಠಾಧೀಶರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಗಳ ಸಾನ್ವಿಧ್ಯದಲ್ಲಿ ಮಂಗಳವಾರ ನಡೆಯಿತು.

ಚಾತುರ್ಮಾಸ್ಯ ವೃತಾಚರಣೆಯ ಎರಡನೇ ದಿನವಾದ ಮಂಗಳವಾರ ನವಾಗಾರ ಪ್ರವೇಶದ ಕುರಿತು ಚಿಂತನ ಗೋಷ್ಠಿ ನಡೆಯಿತು.

Emergency Service

ವಿದ್ವಾಂಸರಾದ ಪ್ರಸಾದ್ ಜೋಶಿ ನಿರೂಪಣೆ ಮಾಡಿದರು ಇದಕ್ಕೂ ಮುನ್ನ ಮಠದ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಬಾಲಚಂದ್ರ ಶಾಸ್ತ್ರಿಗಳು ಚಿಂತನ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು. ವಿದ್ವಾನ್ ಗಣಪತಿ ಭಟ್ಟ ಕಿಬ್ಬಳ್ಳಿ, ಮತ್ತೀಹಳ್ಳಿ ವಿನಾಯಕ ಭಟ್ಟ, ವಿ. ಕುಮಾರ ಭಟ್ಟ ಕೊಳಗಿಬೀಸ್ ಹಾಗೂ ಅನೇಕ ವೈದಿಕರು ಭಾಗವಹಿಸಿದರು.

Cancer Hospital 2

ಬಳಿಕ ವೈದಿಕ ಪರಿಷತ್ತಿನ ಸರ್ವ ಸದಸ್ಯರ ವಾರ್ಷಿಕ ಸಭೆ ಶ್ರೀಗಳವರ ಸಾನಿಧ್ಯದಲ್ಲಿ ಶ್ರೀಮಠದಲ್ಲಿ ನೆರವೇರಿತು.

Bottom Add3
Bottom Ad 2