Kannada NewsKarnataka NewsNationalPolitics

*ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಫರ್ ಇರೋದು ಸತ್ಯ: ಸಚಿವ ಸಂತೋಷ ಲಾಡ್*

ಪ್ರಗತಿವಾಹಿನಿ ಸುದ್ದಿ : ಶಾಸಕರಿಗೆ ಬಿಜೆಪಿ 50 ಕೋಟಿ ಆಫರ್ ಮಾಡಲಾಗಿತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ರಾಜ್ಯದಲ್ಲಿ ಹಲ್ ಚಲ್ ಮೂಡಿಸಿದೆ. ಸಿಎಂ ಹೇಳಿಕೆಗೆ ಸಚಿವ ಸಂತೋಷ ಲಾಡ್ ದ್ವನಿಗೂಡಿಸಿದ್ದಾರೆ.‌

ವಿಧಾನಸೌಧದಲ್ಲಿ ಸಂಪುಟ ಸಭೆಗೂ ಮುನ್ನ ಮಾತನಾಡಿದ ಅವರು, ಶಾಸಕರುಗಳಿಗೆ ಬಿಜೆಪಿ 50 ಕೋಟಿ ಆಫರ್ ಇರೋದು ಸತ್ಯನೇ ಇದೆ. ಸಿಎಂ ಹೇಳಿಕೆಯಲ್ಲಿ ಸತ್ಯನೇ ಇದೆ, ಬಿಜೆಪಿಯವರು ನೇರವಾಗಿ ಹಾಗೂ ಪರೋಕ್ಷವಾಗಿ 18 ತಿಂಗಳಿನಿಂದ ಈ ಕೆಲಸ ಮಾಡ್ತಾರೆ ಇದ್ದಾರೆ. ಶಾಸಕರಿಗೆ ಬಿಜೆಪಿ 50 ಕೋಟಿ ಆಫ‌ರ್ ಮಾಡುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಖಚಿತ ಮಾಹಿತಿ ಇದೆ ಹೀಗಾಗಿ ಸಿಎಂ ಹೇಳಿದ್ದಾರೆ.

Home add -Advt

50 ಕೋಟಿ ಎಲ್ಲಾವೂ ಕೊಡೋದಕ್ಕೆ ಸಾಧ್ಯನಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿಯವರಿಗೆ ಮೋದಿಯವರಿಗೆ ಎನಿಥಿಂಗ್ ಇಸ್ ಪಾಸಿಬಲ್‌ ಇದೆ. ಬಿಜೆಪಿಯವರಿಗೆ ಸರ್ಕಾರ ಅಸ್ಥಿರ ಗೊಳಿಸೋದೆ ಅವರ ಕೆಲಸ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Related Articles

Back to top button