Belagavi NewsBelgaum NewsKannada NewsKarnataka NewsLatest

*550 ಕೆ.ಜಿ.ನಿಷೇಧಿತ ಪ್ಲ್ಯಾಸ್ಟಿಕ್ ವಶ; ವ್ಯಾಪಾರಸ್ಥರಿಗೆ ದಂಡ- ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಗರದ ವ್ಯಾಪಾರ-ವಹಿವಾಟು‌ ಮಳಿಗೆಗಳ ಮೇಲೆ ದಾಳಿ‌ ನಡೆಸಿದ ಮಹಾನಗರ ಪಾಲಿಕೆಯ ಅಧಿಕಾರಿಗಳು ಸುಮಾರು 550 ಕೆ.ಜಿ. ನಿಷೇಧಿತ ಪ್ಲ್ಯಾಸ್ಟಿಕ್ ವಶಪಡಿಸಿಕೊಂಡು ದಂಡವನ್ನು ವಿಧಿಸಿದ್ದಾರೆ.

Home add -Advt

ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಅವರ ನಿರ್ದೇಶನದಂತೆ ನಗರದಾದ್ಯಂತ ಪರಿಶೀಲನೆ ಕೈಗೊಂಡ ಅಧಿಕಾರಿಗಳು 550 ಕೆ.ಜಿ. ಪ್ಲ್ಯಾಸ್ಟಿಕ್ ವಶಪಡಿಸಿಕೊಂಡು 44,000 ರೂಪಾಯಿ ದಂಡವನ್ನು ವಿಧಿಸಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ -2016 ಹಾಗೂ ತಿದ್ದುಪಡಿಯ ನಿಯಮ – 2022 ರಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತರಾದ ಅಶೋಕ ದುಡಗುಂಟಿ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ 14 ಆರೋಗ್ಯ ನಿರೀಕ್ಷಕರು ಹಾಗೂ 2 ಪರಿಸರ ಅಭಿಯಂತರರು ಜೊತೆಗೆ ಎಇಇ (ಪರಿಸರ) ನೇತೃತ್ವದಲ್ಲಿ ಅನೇಕ ತಂಡಗಳು ಪರಿಶೀಲನೆ ನಡೆಸಿದರು.

Related Articles

Back to top button