ಸುರೇಶ ಅಂಗಡಿ ಮೃತರಾಗಿ ಇಂದಿಗೆ 6 ತಿಂಗಳು; ಇಂದೇ ಅವರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಆರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸತತ 4 ಬಾರಿ ಪ್ರತಿನಿಧಿಸಿ, ಕೇಂದ್ರದಲ್ಲಿ ರೈಲ್ವೆ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಸುರೇಶ ಅಂಗಡಿ ನಿಧನರಾಗಿ ಇಂದಿಗೆ 6 ತಿಂಗಳಾಗಿದೆ.
ಕೊರೋನಾ ಹೆಮ್ಮಾರಿಯಿಂದಾಗಿ ಸುರೇಶ ಅಂಗಡಿ ಅನಿರೀಕ್ಷಿತ ಮತ್ತು ಅಕಾಲಿಕವಾಗಿ ಸಾವಿಗೀಡಾದರು. ಸೆಪ್ಟಂಬರ್ 23ರಂದು ಇಡೀ ಕ್ಷೇತ್ರದ ಶಾಕ್ ಗೆ ಒಳಗಾಯಿತು. ಕೊನೆಗ ಅವರ ಮೃತದೇಹ ಕೂಡ ಕ್ಷೇತ್ರಕ್ಕೆ ಬರದೇ ಮಣ್ಣಾಯಿತು.
ಮೊದಲ 3 ಅವಧಿಯಲ್ಲಿ ಕ್ಷೇತ್ರಕ್ಕೆ ಕೆಲಸ ಮಾಡಲಿಲ್ಲ ಎನ್ನುವ ಆರೋಪಗಳನ್ನು ಹೊತ್ತಿದ್ದ ಸುರೇಶ ಅಂಗಡಿ 4ನೇ ಅವಧಿಯಲ್ಲಿ ಕೇಂದ್ರ ರೈಲ್ವೆ ಸಚಿವರಾಗಿ ಬೆಳಗಾವಿ ಜಿಲ್ಲೆಗೆ ಮತ್ತು ಕರ್ನಾಟಕಕ್ಕೆ ಇಲಾಖೆಯಿಂದ ಹಲವಾರು ಪ್ರಮುಖ ಯೋಜನೆಗಳನ್ನು ತಂದಿದ್ದರು. ಎಲ್ಲರೂ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ವಿಧಿಯ ಅಟ್ಟಹಾಸಕ್ಕೆ ಬಲಿಯಾದರು.
ಈಗ ಅವರು ಪ್ರತಿನಿಧಿಸಿದ್ದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಅವರು ನಿಧನರಾಗಿ 6 ತಿಂಗಳು ತುಂಬಿದ ಇಂದೇ ನಾಮಪತ್ರಗಳ ಸ್ವೀಕಾರ ಕಾರ್ಯವೂ ಆರಂಭವಾಗಿದೆ. ಏಪ್ರಿಲ್ 17ರಂದು ಚುನಾವಣೆ ನಡೆಯಲಿದೆ. ಸುರೇಶ ಅಂಗಡಿಯವರ ಪುತ್ರಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರು. ಅನುಕಂಪದ ಅಲೆಯ ಮೇಲೆ ಆಯ್ಕೆಯಾಗಬಹುದು ಎನ್ನುವ ಲೆಕ್ಕಾಚಾರ ಅವರದ್ದು.
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಅಧಿಕೃತ ಅಭ್ಯರ್ಥಿಯ ಘೋಷಣೆ ಆಗಿಲ್ಲ. ಆಕಾಂಕ್ಷಿಗಳು ತೀವ್ರ ಕಸರತ್ತು ನಡೆಸಿದ್ದಾರೆ. ಒಂದೆರಡು ದಿನದಲ್ಲಿ ಅಭ್ಯರ್ಥಿ ನಿರ್ಣಯವಾಗಬಹುದು.
ಕೇಂದ್ರ ಸಚಿವ ಸುರೇಶ ಅಂಗಡಿ ನಿಧನ; ಬೆಳಗಾವಿಗೆ ದೊಡ್ಡ ಶಾಕ್
ಬೆಳಗಾವಿ ಉಪಚುನಾವಣೆ: ಮೊದಲ ದಿನವೇ 2 ನಾಮಪತ್ರ
ಉಪಚುನಾವಣೆ: ನಾಳೆಯಿಂದಲೇ ನಾಮಪತ್ರ ಸಲ್ಲಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ