Kannada NewsLatest

ಕೆನರಾ ವಿದ್ಯಾಜ್ಯೋತಿ ಪ್ರೋತ್ಸಾಹಧನ ವಿತರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ;  ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯದಿಂದ ಮಹಾಂತೇಶ ನಗರ ಕನ್ನಡ ಪ್ರಾಥಮಿಕ ಶಾಲೆ ನಂ.24ರಲ್ಲಿ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯದ ಉಪಮಹಾಪ್ರಬಂಧಕ ಎನ್.ಕೃಷ್ಣಪ್ಪ, ವಿಭಾಗೀಯ ಪ್ರಬಂಧಕರು ಸಂಗಮೇಶ್ ಪಡನಾಡ ಹಾಗೂ  ವೈದ್ಯ ಡಾ.ಶಶಿಕಾಂತ ಕುಲಗೋಡ ಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಜೆ.ಬಜಂತ್ರಿ ಅಧ್ಯಕ್ಷತೆ ವಹಿಸಿದ್ದರು.

Home add -Advt

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ 30 ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಧನ ವಿತರಿಸಲಾಯಿತು. 5,6,7 ನೇ ತರಗತಿಯವರಿಗೆ ತಲಾ 2,500 ರೂ. , 8,9,10ನೇ ತರಗತಿಯವರಿಗೆ ತಲಾ 5 ಸಾವಿರ ರೂ. ವಿತರಿಸಲಾಯಿತು.

ವಿ.ವಿ.ಕಮತೆ ನಿರೂಪಿಸಿದರು. ಐ.ಜಿ.ಕಂಪೇಮಠ ವಂದಿಸಿದರು.

ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯದ ವತಿಯಿಂದ ಒಟ್ಟೂ 120 ವಿದ್ಯಾರ್ಥಿನಿಯರಿಗೆ 4 ಲಕ್ಷ ರೂ.ಪ್ರೋತ್ಸಾಹಧನ ವಿತರಿಸಲಾಯಿತು.

 

 

Related Articles

Back to top button