Latest

ನೆಹರು ಹುಕ್ಕಾ ಸೇದಿದ್ದು ತಪ್ಪಾ..? ರವಿ ಹೇಳಿದ್ದು ತಪ್ಪಾ?; ಮತ್ತೆ ಕಿಡಿ ಹೊತ್ತಿಸಿದ ಸಿ.ಟಿ ರವಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ನೆಹರು ಹೆಸರಲ್ಲಿ ಕಾಂಗ್ರೆಸ್ ನವರು ಬೇಕಾದರೆ ಹುಕ್ಕಾ ಬಾರ್ ತೆರೆಯಲಿ ಎಂಬ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇನ್ನಷ್ಟು ವಿವಾದ ಸೃಷ್ಟಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ನೆಹರು ಅವರು ಹುಕ್ಕಾ ಸೇದುತ್ತಿರುವ ನೂರಾರು ಫೋಟೋಗಳಿವೆ. ಈ ಬಗ್ಗೆ ನಾನು ಹೇಳಬೇಕಿಲ್ಲ. ನೆಹರು ಹುಕ್ಕಾ ಸೇದುತ್ತಿರುವುದು ತಪ್ಪೋ? ರವಿ ಹೇಳಿದ್ದು ತಪ್ಪೋ ಎಂಬುದನ್ನು ಅವರು ಹೇಳಲಿ. ನೆಹರು, ಇಂದಿರಾ ಬಗ್ಗೆ ನಾನು ಮಾತನಾಡಿದ್ದು ತಪ್ಪು ಎನ್ನುತ್ತಾರೆ. ಸಿದ್ದರಾಮಯ್ಯ ಹಾಗು ಸಿ.ಎಂ. ಇಬ್ರಾಹಿಂ ಇಂದಿರಾ ಬಗ್ಗೆ ಮಾತನಾಡಿದ್ದಾರೆ. ಇಂದಿರಾ ಗಾಂಧಿಯನ್ನು ಇಬ್ರಾಹಿಂ ಏನೆಂದು ಕರೆದಿದ್ರು? ಅವರಂತೆ ನಾನು ಆ ಮಟ್ಟಕ್ಕೆ ಇಳಿದಿಲ್ಲ ಎಂದರು.

Home add -Advt

ನನಗೆ ಕುಡಿಯೋ ಅಭ್ಯಾಸವಿಲ್ಲ, ನಾನು ಕುಡುಕ ಅಲ್ಲ, ಕುಡುಕನ ಪಟ್ಟ ಕಟ್ಟಿದರು, ಆದರೆ ಪ್ರತಿದಿನ ಕುಡಿಯುವವರು ಅವರೇ. ನಾನು ಮುಂಜಾನೆ 5 ಗಂಟೆಗೆ ಎದ್ದು ಯೋಗ ಮಾಡುತ್ತೇನೆ. ಸದಾ ಸಕ್ರಿಯನಾಗಿರುತ್ತೇನೆ. ನನ್ನ ಪಕ್ಷ, ಸಮಾಜ, ನಮ್ಮ ರಾಷ್ಟ್ರ ಎಂಬ ಚಿಂತನೆಯಲ್ಲಿಯೇ ತೊಡಗಿಕೊಂಡವನು. ಆದರೆ ಅವರು ಏನೇನು ಮಾಡುತ್ತಾರೆ ಎಂಬುದನ್ನು ಹೇಳಬೇಕೆ? ನಾನು ಆರ್.ಎಸ್.ಎಸ್ ಸ್ವಯಂ ಸೇವಕ. ಹೊರತು ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ : ಬಾಲಚಂದ್ರ ಜಾರಕಿಹೊಳಿ ಹೇಳಿದ್ದೇನು?

Related Articles

Back to top button