Kannada NewsKarnataka NewsLatest

ಜಿಐಟಿಯಲ್ಲಿ ಶನಿವಾರ 6ನೇ ಪದವಿ ಪ್ರದಾನ ಸಮಾರಂಭ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ   (ಜಿ.ಐ.ಟಿ)  6 ನೇಯ ಪದವಿ ಪ್ರದಾನ ಸಮಾರಂಭ” ವನ್ನು  ಅಕ್ಟೋಬರ್ 15 ರಂದು ಬೆಳಿಗ್ಗೆ 10:30 ಗಂಟೆಗೆ, ಸಿಲ್ವರ್ ಜುಬಿಲಿ ಆಡಿಟೋರಿಯಂ, ಜಿಐಟಿ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಕೇಂದ್ರೀಯ ವಿಶ್ವವಿದ್ಯಾಲಯದ  ಕುಲಪತಿ ಪ್ರೊ.ಎಸ್.ಎ.ಕೋರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನ ಭಾಷಣವನ್ನು ಮಾಡಲಿದ್ದಾರೆ. ಜಿ.ಐ.ಟಿ ಮಾಜಿ  ವಿದ್ಯಾರ್ಥಿಯಾದ ಅಶೋಕ ಐರನ್ ಗ್ರೂಪ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ  ಜಯಂತ್ ಹುಂಬರವಾಡಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್ ಎಸ್. ಅವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಟಿಯು ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಿದ್ದಾರೆ.

ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಅನಂತ ಮಂಡಗಿ ಸಮಾರಂಭದ ಅಧ್ಯಕ್ಷತೆ ವಹಿಸುವರು. 

Home add -Advt

ಉಪಾಧ್ಯಕ್ಷ  ಆರ್ ಬಿ ಭಂಡಾರೆ ಹಾಗೂ   ಡಿ ವಿ ಕುಲಕರ್ಣಿ ,  ಕಾರ್ಯಾಧ್ಯಕ್ಷ, ಕರ್ನಾಟಕ ಲಾ ಸೊಸೈಟಿ  ಪ್ರದೀಪ ಸಾವಕಾರ, ಕಾರ್ಯದರ್ಶಿ  ವಿ.ಜಿ.ಕುಲಕರ್ಣಿ ಮತ್ತು  ಎಸ್.ವಿ.ಗಣಾಚಾರಿ, ಮತ್ತು ಜಿಐಟಿ ಆಡಳಿತ ಮಂಡಳಿ ,ಕಾರ್ಯಾಧ್ಯಕ್ಷರು,  ರಾಜೇಂದ್ರ ಬೆಳಗಾಂವಕರ,  ಆಡಳಿತ ಮಂಡಳಿ (ಎಂಎಎಂ), ಕಾರ್ಯಾಧ್ಯಕ್ಷರು,  ಪ್ರಮೋದ ಕಠಾವಿ, ಮತ್ತು ಎಲ್ಲಾ ಅಕಾಡೆಮಿಕ್ ಕೌನ್ಸಿಲ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಲಿದ್ದಾರೆ.

ಈ ವರ್ಷ ಕೆಎಲ್ಎಸ್ ಜಿಐಟಿಯು 779 ಬಿಇ , 66 ಬಿ.ಆರ್ಕ್ ಪದವೀಧರರು ಸೇರಿದಂತೆ 845 ಪದವಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪದವಿಗಳನ್ನು ನೀಡಲಿದೆ. ಮತ್ತು ಯುಜಿ ವಿಭಾಗದಲ್ಲಿ  ಗಿರೀಶ್ ಎಂ. ಪ್ರಭುಖಾನೋಳ್ಕರ್ಮೆಕ್ಯಾನಿಕಲ್ ಇಂಜಿನಿಯರಿಂಗ್ ಅತ್ಯಧಿಕ ಸಿಜಿಪಿಎ 9.97 ಪಡೆದಿದ್ದಾರೆ. ಮತ್ತು ಪಿಜಿಯಲ್ಲಿ ಎಂ.ಟೆಕ್ ಶ್ವೇತಾ ಉಗಾರೆ. ಡಿಜಿಟಲ್ ಕಮ್ಯುನಿಕೇಷನ್ ಅಂಡ್ ನೆಟವರ್ಕಿಂಗ್ನಲ್ಲಿ ಅತ್ಯಧಿಕ ಸಿಜಿಪಿಎ 9.97 ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

 53 ಎಂ.ಟೆಕ್., 108 ಎಂಬಿಎ ಮತ್ತು 118 ಎಂಸಿಎ ವಿದ್ಯಾರ್ಥಿಗಳನ್ನು ಒಳಗೊಂಡು 279 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ , ಒಟ್ಟು 1124 ಪದವೀಧರರಿಗೆ ತಾತ್ಕಾಲಿಕ ಪದವಿಗಳನ್ನು ನೀಡಿ ಗೌರವಿಸಲಿದೆ ಎಂದು ಪ್ರಾಂಶುಪಾಲರಾದ ಡಾ. ಜಯಂತ ಕಿತ್ತೂರ ತಿಳಿಸಿದ್ದಾರೆ. 

  ರಾಷ್ಟ್ರೀಯ ಲೋಕ್ ಅದಾಲತ್; 50 ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿ

https://pragati.taskdun.com/latest/rashtriya-lok-adalathm-l-raghunathmysore/

Related Articles

Back to top button