

ಲಖನೌ: ಬೌಲರ್ ಗಳ ಮಾರಕ ದಾಳಿ ನೆರವಿನಿಂದ ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ 6ನೇ ಜಯ ದಾಖಲಿಸಿತು. ಭಾನುವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 100 ರನ್ ಗಳಿಂದ ಮಣಿಸಿದ ರೋಹಿತ್ ಶರ್ಮ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಸೆಮಿ ಫೈನಲ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 9 ವಿಕೆಟ್ಗೆ 229 ರನ್ ಗಳಿಸಿತು. ಬಳಿಕ ಸಾಧಾರಣ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ 34.5 ಓವರ್‌ಗಳಲ್ಲಿ129 ರನ್ ಗಳಿಗೆ ಸರ್ವಪತನ ಕಂಡಿತು. ಈ ಗೆಲುವಿನಿಂದ ಭಾರತ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದರೆ, 5ನೇ ಸೋಲು ಕಂಡ ಇಂಗ್ಲೆಂಡ್ ಸೆಮೀಸ್ ಹಾದಿ ಬಂದ್ ಆಯಿತು.
*ಸಂಕ್ಷಿಪ್ತ ಸ್ಕೋರ್**
*ಭಾರತ: 50 ಓವರ್‌ಗಳಲ್ಲಿ 9 ವಿಕೆಟ್ಗೆ 229 ರನ್* (* ರೋಹಿತ್ ಶರ್ಮ 87, ಕೆ.ಎಲ್.ರಾಹುಲ್ 39, ಸೂರ್ಯಕುಮಾರ್ ಯಾದವ್ 49, ಡೇವಿಡ್ ವಿಲ್ಲಿ 45ಕ್ಕೆ 3, ಕ್ರಿಸ್ ವೋಕ್ಸ್ 33ಕ್ಕೆ 2, ಆದಿಲ್ ರಶೀದ್ 35ಕ್ಕೆ 2), *ಇಂಗ್ಲೆಂಡ್: 34.5 ಓವರ್‌ಗಳಲ್ಲಿ 129* (ಬೇರ್ ಸ್ಟೋ 14, ಮೊಯಿನ್ ಅಲಿ 15, ಲಿವಿಂಗ್ ಸ್ಟೋನ್ 27, ಜಸ್ ಪ್ರೀತ್ ಬುಮ್ರಾ 32ಕ್ಕೆ 3, ಮೊಹಮದ್ ಶಮಿ 22ಕ್ಕೆ 2, ಕುಲದೀಪ್ ಯಾದವ್ 24ಕ್ಕೆ2)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ