Kannada NewsKarnataka News

7ರಂದು ಏಳು ಕೃತಿಗಳು ಲೋಕಾರ್ಪಣೆ

7ರಂದು ಏಳು ಕೃತಿಗಳು ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ಲೇಖಕಿಯರ ಸಂಘ ಹಾಗೂ ಸಂಕೇಶ್ವರದ ಲೋಕವಿದ್ಯಾ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಲೇಖಕಿ ಜಯಶ್ರೀ ಜಯಪ್ರಕಾಶ ಅಬ್ಬಿಗೇರಿ ಅವರ ಏಳು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಜು.೭ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಡಾ.ಗುರುದೇವಿ ಹುಲ್ಲೆಪ್ಪನವರಮಠ ವಹಿಸುವರು. ಹಿರಿಯ ಸಂಶೋಧಕ ಡಾ. ಗುರುಪಾದ ಮರಿಗುದ್ದಿ ಹಾಗೂ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಇವರು ಕೃತಿಗಳ ಲೋಕಾರ್ಪಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ನಿವೇದಿತ ಪ್ರಕಾಶನದ ಪ್ರಕಾಶಕ ಉಮೇಶ ನಾಗಮಂಗಲ ಆಗಮಿಸುವರು. ಕೃತಿಗಳ ಪರಿಚಯವನ್ನು ಸಾಹಿತಿಗಳಾದ ಅರ್ಜುನ ಗೊಳಸಂಗ, ಎ.ಎಸ್.ಮಕಾನದಾರ, ಸುನಂದಾ ಎಮ್ಮಿ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.///

Web Title : 7ರಂದು ಏಳು ಕೃತಿಗಳು ಲೋಕಾರ್ಪಣೆ – 7 Books will be released on 7th – Pragati Vahini

Home add -Advt

Related Articles

Back to top button