Kannada NewsKarnataka NewsLatest

ಆಸ್ತಿಗಾಗಿ ಮಾರಣಾಂತಿಕ ಹಲ್ಲೆ: ಆರೋಪಿಗಳಿಗೆ ಜೈಲು ಶಿಕ್ಷೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಮೂವರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿತರಿಗೆ ಇಲ್ಲಿನ ೮ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೭ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

೨೦೧೫ರ ಆಗಸ್ಟ್ ೧೩ರಂದು ರಾತ್ರಿ ರಾಮದುರ್ಗಠಾಣಾ ವ್ಯಾಪ್ತಿಯ ದೊಡಮಂಗಡ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ನಿಂಗವ್ವ ಚಿನ್ನಪ್ಪ ಜಂಚೇಲಿ(೫೫) ರಾಮಣ್ಣ ಚಿನ್ನಪ್ಪ ಚಂಜೇಲಿ(೨೩) ಎಂಬುವವರು ಅವರ ಸಂಬಂಧಿಗಳಾದ ಚಂಗೆವ್ವ ವಿಠಲ ಜಂಚೇಲಿ(೩೮), ಅವರ ಮಗ ಮಂಜುನಾಥ(೧೭) ಹಾಗೂ ಅಳಿಯ ಸುರೇಶ ಸೋಮಪ್ಪ ಕಲ್ಲಳ್ಳಿ(೨೮)ರ ಮೇಲೆ ಕೊಡಲಿಯಿಂದ ತಲೆ, ಕೈ ಕಾಲುಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ನಿಂಗವ್ವನ ಪತಿಯ ಆಸ್ತಿಯಲ್ಲಿ ತಮಗೂ ಪಾಲು ನೀಡುವಂತೆ ಇವರು ಒತ್ತಾಯಿಸಿದ್ದೇ ಘಟನೆಗೆ ಕಾರಣವಾಗಿತ್ತು. ರಾಮದುರ್ಗ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ಪೂರ್ತಿ ವಿವರಣೆ ಪಡೆದು ವಿಚಾರಣೆ ನಡೆಸಿದ ೮ನೇ ಅಪರ ಜಿಲ್ಲಾ ಮತ್ತು  ಸತ್ರ ನ್ಯಾಯಾಧೀಶರಾದ ವಿ.ಬಿ ಸೂರ್ಯವಂಶಿ ಅವರು ಅಪರಾಧಿಗಳಿಗೆ ೭ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತಿರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಅಭಿಯೋಜಕರಾದ ಕಿರಣ್ ಎಸ್ ಪಾಟೀಲ ವಾದ ಮಂಡಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button