ಪ್ರಗತಿವಾಹಿನಿ, ಮುಂಬೈ: ಮುಂಬೈನಲ್ಲಿ ಕಳೆದ ಸುಮಾರು 3 ದಶಕಗಳಿಂದ ನಕಲಿ ದಾಖಲೆಗಳನ್ನು ಬಳಸಿ ವಕೀಲಿ ವೃತ್ತಿ ಮಾಡುತ್ತಿದ್ದ ಹಿರಿಯ ಮಹಿಳೆ ಕೊನೆಗೂ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾಳೆ.
ಎಂ. ರೆಬೆಕಾ ಜಾವ್ಬ್ ಅಲಿಯಾಸ್ ಮಂದಾಕಿನಿ ಕಾಶೀನಾಥ ಸೋಹನಿ (72) ಎಂಬುವವರೇ ಆ ನಕಲಿ ವಕೀಲೆ.
ಈ ಮಹಿಳೆಯ ಬಳಿ ವಕೀಲಿ ವೃತ್ತಿ ಕೈಗೊಳ್ಳಲು ಅಗತ್ಯವಿರುವ ಲೈಸೆನ್ಸ್ ಇರಲೇ ಇಲ್ಲ. ಹಾಗಿದ್ದರೂ ಕಳೆದ ಹಲವಾರು ದಶಕಗಳಿಂದ ಮುಂಬೈನ ಕೌಟುಂಬಿಕ ನ್ಯಾಯಾಲಯವೂ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಈಕೆಯ ಬಳಿ ಲೈಸೆನ್ಸ್ ಇಲ್ಲ ಎಂಬ ದೂರು ಇತ್ತೀಚೆಗೆ ಕೇಳಿ ಬಂದಾಗ ಪೊಲೀಸರು ತನಿಖೆ ನಡೆಸಲಾಗಿ ಸತ್ಯ ಹೊರ ಬಿದ್ದಿದೆ. ಸಧ್ಯ ನಕಲಿ ವಕೀಲೆ ಮುಂಬೈನ ಬಿಕೆಎಸ್ ಪೊಲೀಸರ ವಶದಲ್ಲಿದ್ದಾಳೆ.
https://pragati.taskdun.com/latest/worldshighest-battle-fieldgets-internet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ