ಪ್ರಗತಿವಾಹಿನಿ; ನವದೆಹಲಿ: ಜಗತ್ತಿನ ಅತ್ಯಂತ ಎತ್ತರದ ಯುದ್ದಭೂಮಿ ಎಂದು ಗುರುತಿಸಲಾಗಿರುವ ಭಾರತದ ಸಿಯಾಚಿನ್ ಗ್ಲೇಷಿಯರ್ ನಲ್ಲಿ ಈಗ ಉಪಗ್ರಹ ಆಧಾರಿತ ಇಂಟರ್ ನೆಟ್ ಸೇವೆ ಲಭ್ಯವಾಗಿದೆ.
ದೇಶದ ರಕ್ಷಣಾ ಸಾಮರ್ಥ್ಯದ ದೃಷ್ಟಿಯಿಂದ ಇದೊಂದು ಮೈಲುಗಲ್ಲು ಎಂದೇ ಬಣ್ಣಿಸಲಾಗುತ್ತಿದೆ. ಸಿಯಾಚಿನ್ ಗ್ಲೇಷಿಯರ್ 19061 ಅಡಿ ಎತ್ತರದಲ್ಲಿದ್ದು ತೀವ್ರ ಹಿಮಪಾತವಾಗುತ್ತದೆ. ಆಧುನಿಕ ಸಂಪರ್ಕ ಸಾಧನಗಳ ಕಾರ್ಯಾಚರಣೆ ಅಸಾಧ್ಯ ಎಂದೇ ಭಾವಿಸಲಾಗಿತ್ತು. ಆದರೆ ಛಲ ಬಿಡದ ಬಿಬಿಎನ್ ಎಲ್ ( ಭಾರತ್ ಬ್ರಾಡ್ ಬ್ಯಾಂಡ್ ನೆಟ್ವರ್ಕ್ ಲಿಮಿಟೆಡ್ ) ಇಂಜಿನಿಯರ್ ಗಳು ಇದನ್ನೀಗ ಸಾಧ್ಯವಾಗಿಸಿದ್ದಾರೆ.
ಭಾರತೀಯ ಸೈನಿಕರು ಸಿಯಾಚಿನ್ ಗ್ಲೇಷಿಯರ್ ನಲ್ಲಿ ಇಂಟರ್ ನೆಟ್ ಸೇವೆ ಒದಗಿಸಿರುವ ಚಿತ್ರವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ನಡುಬೀದಿಯಲ್ಲಿ ನಾರಿಮಣಿಯರ ಏಟಿಗೆ ಯುವಕ ಹಣ್ಣುಗಾಯಿ ನೀರುಗಾಯಿ; ವಿಡಿಯೊ ವೈರಲ್
https://pragati.taskdun.com/crime/women-beat-youth-belt-street-vivekanandaairport-raipur-chattisghar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ