
ಪ್ರಗತಿವಾಹಿನಿ ಸುದ್ದಿ, ಕ್ಯಾಲಿಫೋರ್ನಿಯಾ: ಇತ್ತೀಚೆಗಷ್ಟೇ ಅಜ್ಞಾತನಿಂದ ಅಪಹರಣಕ್ಕೊಳಗಾಗಿದ್ದ ಭಾರತೀಯ ಮೂಲದ ಕುಟುಂಬದ 8 ತಿಂಗಳ ಮಗು ಸೇರಿದಂತೆ ಎಲ್ಲ ನಾಲ್ವರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ.
ವಾರದ ಆರಂಭದಲ್ಲಿ ಈ ಕುಟುಂಬವನ್ನು ಬೆದರಿಸಿ ಅವರ ಇಚ್ಛೆಗೆ ವಿರುದ್ಧವಾಗಿ ಅಪಹರಿಸಲಾಗಿತ್ತು. ಎಂಟು ತಿಂಗಳ ಮಗು ಅರೂಹಿ ಧೇರಿ ಮತ್ತು ಆಕೆಯ ಪೋಷಕರಾದ ಜಸ್ಲೀನ್ ಕೌರ್ (27), ಜಸ್ದೀಪ್ ಸಿಂಗ್ (36) ಮತ್ತು ಮಗುವಿನ ಚಿಕ್ಕಪ್ಪ ಅಮನ್‌ದೀಪ್ ಸಿಂಗ್ (39 ) ಅವರನ್ನು ಅಪಹರಣಕಾರರು ಕೊಲೆ ಮಾಡಿದ್ದಾರೆ.
“ಇಂದು ರಾತ್ರಿ ನಮ್ಮಲ್ಲಿದ್ದ ಕೆಟ್ಟ ಆತಂಕ ನಿಜವಾಗಿಬಿಟ್ಟಿತು” ಎಂದು ಪೊಲೀಸರು ಹೇಳಿದ್ದಾರೆ.
ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಹಠಾತ್ ಪ್ರವಾಹ; ಕನಿಷ್ಠ 8 ಸಾವು, ಹಲವರು ನಾಪತ್ತೆ