ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಹಾವೇರಿಯಲ್ಲಿ ನಡೆಯುತ್ತಿರುವ 86ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾವೇರಿಯ ಪುಣ್ಯ ಭೂಮಿಯಲ್ಲಿ ಜನಿಸಿದ ಭಕ್ತ ಶ್ರೇಷ್ಠರಾದ ಕನಕದಾಸ, ಸಂತ ಶಿಶುನಾಳ ಶರೀಫ ಮತ್ತು ಕ್ರಾಂತಿಕವಿ ಸರ್ವಜ್ಞರ ಕೀರ್ತನೆ, ತತ್ವಪದ, ತ್ರಿಪದಿಗಳ ಗಾಯನ ಹಾಗೂ ನೃತ್ಯದ ವಿಶೇಷ ಕಾರ್ಯಕ್ರಮ ‘ಸಾಮರಸ್ಯದ ಭಾವ: ಕನ್ನಡದ ಜೀವ’ ಎನ್ನುವ ಕಾರ್ಯಕ್ರಮವನ್ನು ಏರ್ಪಡಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಿಳಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತನ್ನಾಗಿಸುವ ಮಹತ್ವಾಕಾಂಕ್ಷೆಯಲ್ಲಿ ಅಧ್ಯಕ್ಷರಾದ ನಾಡೋಜ. ಡಾ. ಮಹೇಶ ಜೋಶಿಯವರು ಬೆಳಕಿಗೆ ಬಾರದ, ಕ್ಯಾಮರಾವನ್ನೇ ಎಂದೂ ಎದುರಿಸದ, ಅವಕಾಶವಂಚಿತರಾಗಿ ಗುಪ್ತವಾಗಿರುವ ಪ್ರತಿಭಾವಂತರಾದ ಗಾಯಕರಿಗೆ ಮತ್ತು ನೃತ್ಯ ತಂಡಗಳಿಗೆ ಈ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗುತ್ತಿದೆ. ಇದಕ್ಕಾಗಿ ಡಿಸೆಂಬರ್ 17 ಶನಿವಾರ ಮತ್ತು 18ರ ಭಾನುವಾರದಂದು ಹಾವೇರಿಯ ಹೈಟೆಕ್ ಕಲಾಭವನ, ಗೂಗಿಕಟ್ಟಿ ನಗರಸಭೆ ಮಳಿಗೆ, ಜೆ.ಪಿ. ಸರ್ಕಲ್ ಹತ್ತಿರ, ವಿನಾಯಕ ಹೊಟೇಲ್ ಹಿಂಭಾಗ, ಹಾವೇರಿ- 581110 ಇಲ್ಲಿ ಧ್ವನಿ ಪರೀಕ್ಷೆ ಮತ್ತು ನೃತ್ಯ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿದೆ.
ಡಿಸೆಂಬರ್ 17 ರ ಶನಿವಾರದಂದು ಬೆಳಗ್ಗೆ 7 ಗಂಟೆಯಿಂದ ಧ್ವನಿ ಪರೀಕ್ಷೆಗೆ ಹಾಗೂ ಡಿಸೆಂಬರ್ 18ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ನೃತ್ಯ ಪರೀಕ್ಷೆಗೆ ನೋಂದಣಿ ಪ್ರಾರಂಭವಾಗಲಿದೆ. ನೋಂದಾಯಿತ ತಂಡಗಳಿಗೆ ಮತ್ತು ವ್ಯಕ್ತಿಗಳಿಗೆ ನೋಂದಣಿ ಸಂಖ್ಯೆಗೆ ಅನುಗುಣವಾಗಿ ಧ್ವನಿ ಮತ್ತು ನೃತ್ಯ ಪರೀಕ್ಷೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ.ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಿ:
1. ಶ್ರೀ ಲಿಂಗಯ್ಯ ಹಿರೇಮಠ, ಜಿಲ್ಲಾ ಕಸಾಪ ಅಧ್ಯಕ್ಷರು – 9902768704
2. ಶ್ರೀ ಮುಚ್ಚಂಡಿ ಕೆ.ಎಸ್. – 9448873992
3. ಶ್ರೀ ಗೂಳಪ್ಪ ಅರಳಿಕಟ್ಟಿ, ಹಾವೇರಿ – 9341443662
4. ಶ್ರೀ ಪರಮೇಶ್, ಬೆಂಗಳೂರು – 9845701411
ಸೂಚನೆಗಳು:
1. ನೋಂದಣಿಯು ಡಿ.17 ಮತ್ತು 18ರಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಲಿದ್ದು, ನೋಂದಣಿ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಪ್ರತಿಯೊಬ್ಬರಿಗೂ ನೋಂದಣಿ ಕ್ರಮಸಂಖ್ಯೆ ನೀಡಲಾಗುವುದು.
2. ಹಾಡು ಮತ್ತು ನೃತ್ಯದ ಆಯ್ಕೆಯನ್ನು ಹಾಡುಗಾರರು ಮತ್ತು ತಂಡಗಳೇ ಮಾಡಿ ಕೊಳ್ಳಬೇಕು. ಇವು ಕನಕದಾಸ, ಶರೀಫ ಮತ್ತು ಸರ್ವಜ್ಞರ ರಚನೆಗಳೇ ಆಗಿರಬೇಕು. ಬೇರೆ ಯಾರದೇ, ಯಾವುದೇ ರಚನೆಗಳಿಗೆ ಅವಕಾಶ ಇರುವುದಿಲ್ಲ.
3. ತಮ್ಮ ಸರದಿ ಬಂದ ಕೂಡಲೇ ಪ್ರದರ್ಶನ ನೀಡಲು ಸಿದ್ಧರಿರಬೇಕು, ಯಾವುದೇ ಪೂರ್ವ ತರಬೇತಿಗೆ ಅವಕಾಶ ಇರುವುದಿಲ್ಲ
4. ತೀರ್ಪಗಾರರ ತೀರ್ಮಾನಗಳೇ ಅಂತಿಮವಾಗಿದ್ದು ಈ ಕುರಿತು ಯಾವುದೇ ಚರ್ಚೆಗೆ ಅವಕಾಶವಿರುವುದಿಲ್ಲ.
5. ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲಿದ್ದು ಹೊಸ ಪ್ರತಿಭಾವಂತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು.
6. ಆಯ್ಕೆ ಪ್ರಕ್ರಿಯೆಗೆ ಬಂದು ಹೋಗಲು ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ
7. ಊಟ, ವಸತಿ ಇನ್ನಿತರ ಯಾವುದೇ ಸೌಲಭ್ಯವನ್ನು ಕಲ್ಪಿಸಲಾಗುವುದಿಲ್ಲ.
8. ಸಮ್ಮೇಳನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯ್ಕೆಯಾದವರಿಗೆ ಸಮ್ಮೇಳನದ ವೇದಿಕೆಯಲ್ಲಿ ಪ್ರದರ್ಶನ ನೀಡುವ ಸುವರ್ಣ ಅವಕಾಶ ದೊರಕಲಿದ್ದು, ಸಮ್ಮೇಳನದ ನಿಯಮಗಳಿಗೆ ಅನುಗುಣವಾಗಿ ಭತ್ಯೆ, ವಸತಿ, ಇತರ ಸೌಲಭ್ಯಗಳು ದೊರಕಲಿವೆ.
*ತಹಶೀಲ್ದಾರ್ ಮನೆಯಲ್ಲಿ ಕಳ್ಳರ ಕೈಚಳಕ; ಲಕ್ಷಾಂತರ ರೂಪಾಯಿ ಚಿನ್ನಾಭರಣ, ಹಣ ದೋಚಿ ಪರಾರಿ*
https://pragati.taskdun.com/gokaktahashildar-hometheaft/
*ಶಿವಾನಂದ ತಗಡೂರು ಅವರಿಗೆ ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿ ಪ್ರಶಸ್ತಿ ಪ್ರದಾನ*
https://pragati.taskdun.com/gadinadu-sahitya-awardshivananda-tagadurkerala/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ