ಪ್ರಗತಿ ವಾಹಿನಿ ಹೆಲ್ತ್ ಟಿಪ್ಸ್ –
ಅಧಿಕ ತೂಕ ಅಥವಾ ಸ್ಥೂಲಕಾಯವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಮತೋಲಿತ ಜೀವನಶೈಲಿ ಮತ್ತು ಪೌಷ್ಟಿಕ ಆಹಾರವು ಆರೋಗ್ಯಕರ ಜೀವನ ಮತ್ತು ತೂಕ ನಿಯಂತ್ರಣಕ್ಕೆ ಮುಖ್ಯವಾಗಿದೆ.
ದೇಹದ ತೂಕ ಹೆಚ್ಚಾಗುವುದರಿಂದ ಹೃದ್ರೋಗ , ಅಧಿಕ ರಕ್ತದೊತ್ತಡ ಮತ್ತು ಟೈಪ್ ೨ ಮಧುಮೇಹ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಆದರೆ ತೂಕವನ್ನು ಏಕಾಏಕಿ ಕಡಿಮೆ ಮಾಡಲು ಅನೇಕರು ಅನುಸರಿಸುವ ಕ್ರ್ಯಾಶ್ ಡಯೆಟ್‌ಗಳು ಸೂಕ್ತ ಪರಿಹಾರವಲ್ಲ ಎಂದು ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ. ಸುರಕ್ಷಿತವಾಗಿ ತೂಕವನ್ನು ಕಳೆದುಕೊಳ್ಳಲು ಮತ್ತು ಕಾಲಾನಂತರದಲ್ಲಿ ಕಡಿಮೆ ತೂಕವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಜೀವನಶೈಲಿಯನ್ನು ಬದಲಾಯಿಸುವುದು ಅತ್ಯಗತ್ಯ.
ತೂಕವನ್ನು ಕಡಿಮೆ ಮಾಡಲು ಅನುಸರಿಸಬಹುದಾದ ಪರಿಣಾಮಕಾರಿ ಸೂತ್ರಗಳು ಇಂತಿವೆ:
೧. ವೈವಿಧ್ಯಮಯ, ಪೌಷ್ಟಿಕ ಆಹಾರವನ್ನು ಸೇವಿಸಿ.
ಆರೋಗ್ಯಕರ ಊಟ ಮತ್ತು ತಿಂಡಿಗಳು ಮಾನವ ಆಹಾರದ ಅಡಿಪಾಯವನ್ನು ರೂಪಿಸಬೇಕು. ಪ್ರತಿ ಊಟವು ಶೇ. ೫೦ ರಷ್ಟು ಹಣ್ಣು ಮತ್ತು ತರಕಾರಿಗಳು, ೨೫ ಪ್ರತಿಶತ ಧಾನ್ಯಗಳು ಮತ್ತು ಶೇ. ೨೫ ರಷ್ಟು ಪ್ರೋಟೀನ್ ಒಳಗೊಂಡಿರಬೇಕು. ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಮೀನು, ಕಾಳುಗಳು, ಬೀಜಗಳು, ಧಾನ್ಯಗಳು, ಕಂದು ಅಕ್ಕಿ ಮೊದಲಾದವು ಉತ್ತಮ ಆಹಾರವಾಗಿದೆ. ಎಣ್ಣೆ, ಬೆಣ್ಣೆ ಮತ್ತು ಸಕ್ಕರೆಯನ್ನು ಸೇರಿಸಿದ ಆಹಾರಗಳು, ಮಾಂಸ, ಬಿಳಿ ಬ್ರೆಡ್, ಸಂಸ್ಕರಿಸಿದ ಆಹಾರಗಳು ದೇಹದ ತೂಕವನ್ನು ಹೆಚ್ಚಿಸಬಹುದು.
೨. ಆಹಾರ ಮತ್ತು ತೂಕದ ದಿನಚರಿಯನ್ನು ಬರೆದಿಟ್ಟುಕೊಳ್ಳಿ
ಸ್ವಯಂ-ಮೇಲ್ವಿಚಾರಣೆಯು ದೇಹದ ತೂಕ ಕಳೆದುಕೊಳ್ಳುವಲ್ಲಿ ಪ್ರಮುಖ ಅಂಶವಾಗಿದೆ. ಜನರು ಪ್ರತಿ ದಿನ ಸೇವಿಸುವ ಆಹಾರದ ಪ್ರತಿಯೊಂದು ಐಟಂ ಅನ್ನು ರೆಕಾರ್ಡ್ ಮಾಡಲು ಪೇಪರ್ ಡೈರಿ, ಮೊಬೈಲ್ ಅಪ್ಲಿಕೇಶನ್ ಅಥವಾ ಮೀಸಲಾದ ವೆಬ್‌ಸೈಟ್ ಅನ್ನು ಬಳಸಬಹುದು. ವಾರಕ್ಕೊಮ್ಮೆ ತಮ್ಮ ತೂಕವನ್ನು ದಾಖಲಿಸುವ ಮೂಲಕ ಪ್ರಗತಿಯನ್ನು ಅಳೆಯಬಹುದು.
೩. ನಿಯಮಿತ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ
ನಿಯಮಿತ ದೈಹಿಕ ಚಟುವಟಿಕೆಯು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನಿಯಮಿತ ವ್ಯಾಯಾಮ ಅತ್ಯಗತ್ಯ . ಶಿಸ್ತುಬದ್ಧ ರೀತಿಯಲ್ಲಿ ದೈಹಿಕ ಚಟುವಟಿಕೆಯ ಆವರ್ತನವನ್ನು ಹೆಚ್ಚಿಸುವುದರಿಂದ ತೂಕ ಕಳೆದುಕೊಳ್ಳಲು ಸಹಾಯಕವಾಗುತ್ತದೆ.
ವೇಗದ ನಡಿಗೆಯಂತಹ ದಿನಕ್ಕೆ ಒಂದು ಗಂಟೆಯ ಚಟುವಟಿಕೆಗಳು ಪ್ರಯೋಜನಕಾರಿಯಾಗಿವೆ. ದಿನಕ್ಕೆ ಒಂದು ಗಂಟೆ ಸಾಧ್ಯವಾಗದಿದ್ದರೆ, ವಾರಕ್ಕೆ ೧೫೦ ನಿಮಿಷಗಳ ಗುರಿಯನ್ನು ಹೊಂದಿರಬೇಕು ಎಂದು ಮೇಯೊ ಕ್ಲಿನಿಕ್ ಸೂಚಿಸುತ್ತದೆ. ನಿಧಾನವಾಗಿ ವ್ಯಾಯಾಮದ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ಕ್ರಮೇಣ ಅದರ ತೀವ್ರತೆಯನ್ನು ಹೆಚ್ಚಿಸಬೇಕು.
೪. ಸಿಹಿ ಪಾನೀಯಗಳ ಸೇವನೆಯಿಂದ ದೂರವಿರಿ
ಸಕ್ಕರೆ ಬೆರೆಸಿದ ಸಿಹಿಯಾದ ಸೋಡಾ, ಚಹಾ, ಜ್ಯೂಸ್ ಅಥವಾ ಆಲ್ಕೋಹಾಲ್ ದೇಹದಲ್ಲಿ ನೂರಾರು ಕ್ಯಾಲೋರಿಗಳನ್ನು ಒಮ್ಮೆಲೇ ಹೆಚ್ಚಿಸುತ್ತದೆ. ಇವುಗಳನ್ನು ಖಾಲಿ ಕ್ಯಾಲೋರಿಗಳು ಎಂದು ಕರೆಯಲಾಗುತ್ತದೆ ಏಕೆಂದರೆ ಅವು ಯಾವುದೇ ಪೌಷ್ಟಿಕಾಂಶದ ಪ್ರಯೋಜನಗಳನ್ನು ನೀಡುವುದಿಲ್ಲ. ಊಟದ ಬದಲು ದ್ರವಾಹಾರವನ್ನು ಸೇವಿಸುವುದಾದರೂ ಸಹ ಸಕ್ಕರೆ ಬೆರೆಸದೇ ಇರುವ ಪಾನೀಯಗಳನ್ನೇ ಸೇವಿಸಿದರೆ ತೂಕ ಕಳೆದುಕೊಳ್ಳಲು ಪ್ರಯೋಜನಕಾರಿಯಾಗುತ್ತದೆ.
೫. ಆಹಾರದ ಅಳತೆಯಿರಲಿ
ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿಯನ್ನು ಸಹ ಅತಿಯಾಗಿ ಸೇವಿಸಿದರೆ ದೇಹದ ತೂಕ ಹೆಚ್ಚಳವಾಗುತ್ತದೆ. ಹಾಗಾಗಿ ಊಟದ ತಟ್ಟೆಗೆ ಆಹಾರ ಬಡಿಸಿಕೊಳ್ಳುವಾಗಲೇ ಮಿತಿಯಿರಬೇಕು. ಅಳತೆ ಕಪ್ಪುಗಳನ್ನು ಬಳಸುವುದು ಉತ್ತಮ.
೬. ಬುದ್ದಿಪೂರ್ವಕವಾಗಿ ತಿನ್ನಿರಿ
ಏಕೆ, ಹೇಗೆ, ಯಾವಾಗ, ಎಲ್ಲಿ, ಮತ್ತು ಏನು ತಿನ್ನಬೇಕು ಎಂಬುದರ ಸಂಪೂರ್ಣ ಅರಿವು ಒಳಗೊಂಡಿರಬೇಕು. ಜಾಗರೂಕರಾಗಿ ಆಹಾರ ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು.
ಆಹಾರ ಸೇವನೆಯ ಸಂದರ್ಭದಲ್ಲಿ ಅದರ ಬಗ್ಗೆ ಹೆಚ್ಚು ಲಕ್ಷ್ಯ ವಹಿಸುವುದರಿಂದ ನಿಧಾನವಾಗಿ ತಿನ್ನುವುದು ಸಹ ಅಭ್ಯಾಸವಾಗುತ್ತದೆ. ಆಹಾರ ಸೇವನೆ ಬಳಿಕ ಹೊಟ್ಟೆ ತುಂಬಿತು ಎಂಬುದಕ್ಕಿಂತ ತೃಪ್ತಿ ದೊರೆಯುವ ಬಗ್ಗೆ ಕೇಂದ್ರೀಕರಿಸಬೇಕು.
೭. ಆಹಾರ ಸೇವನೆಗೆ ಪ್ರಚೋದಿಸುವುದರ ಮೇಲೆ ನಿಯಂತ್ರಣವಿರಲಿ
ಸಾಮಾಜಿಕ ಪರಿಸರದಲ್ಲಿ ತಿನ್ನುವುದನ್ನು ಪ್ರೋತ್ಸಾಹಿಸುವ ಅನೇಕ ಆಕರ್ಷಣೆಗಳಿವೆ. ಅಲ್ಲದೇ ಟಿವಿ, ಸಿನೇಮಾಗಳನ್ನು ನೋಡುತ್ತ ತಿನ್ನುವಾಗ ತಿನ್ನುವ ಪ್ರಮಾಣದ ಮೇಲೆ ನಿಯಂತ್ರಣವಿರುವುದಿಲ್ಲ. ಇಂಥಹ ಯಾವುದೇ ಬಗೆಯಲ್ಲಿ ಹೆಚ್ಚು ತಿನ್ನುವ ಸಂದರ್ಭಗಳ ಮೇಲೆ ನಿಯಂತ್ರಣವಿರಲಿ.
೮. ಅಡುಗೆ ಮನೆಯಲ್ಲಿ
ಅಡುಗೆ ಮನೆಯಲ್ಲಿ ತೂಕ ಕಳೆದುಕೊಳ್ಳಲು ಅನುಕೂಲವಾಗುವ ಆಹಾರ ಪದಾರ್ಥಗಳನ್ನೇ ಹೆಚ್ಚಾಗಿ ಇಟ್ಟುಕೊಳ್ಳುವುದು ಮಹತ್ವದ್ದು. ರಚನಾತ್ಮಕ ಊಟದ ಯೋಜನೆಗಳನ್ನು ರಚಿಸುವುದು ಹೆಚ್ಚು ಗಮನಾರ್ಹವಾದ ತೂಕ ನಷ್ಟಕ್ಕೆ ಅನುಕೂಲವಾಗುತ್ತದೆ.
ತೂಕವನ್ನು ಕಳೆದುಕೊಳ್ಳಲು ಅಥವಾ ಅದನ್ನು ದೂರವಿಡಲು ಬಯಸುವ ಜನರು ತಮ್ಮ ಅಡುಗೆಮನೆಯಲ್ಲಿ ಸಂಸ್ಕರಿಸಿದ ಅಥವಾ ಜಂಕ್ ಫುಡ್‌ಗಳನ್ನು ಇಡಲೇಬಾರದು. ಸರಳವಾದ, ಆರೋಗ್ಯಕರ ಊಟವನ್ನು ಮಾಡಬೇಕು.
೯ ಧನಾತ್ಮಕವಾಗಿರಿ
ದೇಹದ ತೂಕ ಕಳೆದುಕೊಳ್ಳುವುದನ್ನು ಏಕಾಏಕಿ ಸಾಧಿಸಲು ಸಾಧ್ಯವಿಲ್ಲ. ಅದು ನಿಧಾನವಾಗಿ ಕಾರ್ಯಗತವಾಗುತ್ತದೆ. ನಿರೀಕ್ಷಿಸಿದ ಪ್ರಮಾಣದಲ್ಲಿ, ಅಷ್ಟೇ ವೇಗವಾಗಿ ದೇಹದ ತೂಕ ಇಳಿಕೆಯಾಗದಿದ್ದರೆ ನಿರುತ್ಸಾಹಗೊಳ್ಳುವ ಅಗತ್ಯವಿಲ್ಲ. ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಗುರಿಯತ್ತ ಮುನ್ನುಗ್ಗಬೇಕು.
ಸಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಳ್ಳುವುದು ಅತ್ಯಗತ್ಯ.
ತೂಕ ನಷ್ಟವು ಪ್ರಾಥಮಿಕವಾಗಿ ಕ್ಯಾಲೋರಿಗಳ ಒಟ್ಟು ಸೇವನೆಯನ್ನು ಕಡಿಮೆ ಮಾಡುವುದರ ಮೇಲೆ ಅವಲಂಬಿತವಾಗಿರುತ್ತದೆ, ಆದರೆ ದಿನಕ್ಕೆ ೧೦೦೦ ಕ್ಯಾಲೋರಿಗಿಂತ ಕಡಿಮೆ ಆಹಾರ ಸೇವಿಸಿದರೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭಿಸುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು.
https://pragati.taskdun.com/pragativahini-special/tips-for-wight-loss/
ಬೆಳಗಿನ ವಾಕಿಂಗ್‌ನ 13 ಅದ್ಭುತ ಪ್ರಯೋಜನಗಳು
https://pragati.taskdun.com/article/13-amazing-benefits-of-morning-walking/
ಕನ್ನಡತಿ ಜಯಶ್ರೀ ಭೋಜ್ ಮಹಾರಾಷ್ಟ್ರ ವಾರ್ತಾ ಇಲಾಖೆಯ ಮಹಾನಿರ್ದೇಶಕಿ
https://pragati.taskdun.com/latest/kannadathi-jayashree-bhoj-is-director-general-of-maharashtra-news-and-public-relations-department/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ