Latest

ಗೀತಾ ನಾಗಭೂಷಣ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಖ್ಯಾತ ಕಾದಂಬರಿಗಾರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ ಗೀತಾ ನಾಗಭೂಷಣ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಕಲಬುರ್ಗಿ ಜಿಲ್ಲೆ ಸಾವಳಗಿಯಲ್ಲಿ 1942 ಮಾರ್ಚ್ 25ರಂದು ಜನಿಸಿದ್ದ ಗೀತಾ ನಾಗಭೂಷಣ 2010ರಲ್ಲಿ  ಗದಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದರು.

ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ್ದ ಗೀತಾ ನಾಗಭೂಷಣ ಕಷ್ಟಕರ ಬಾಲ್ಯ ಅನುಭವಿಸಿ ಹಾಗೂ ಕಠಿಣ ಪರಿಶ್ರಮದಿಂದ ಶಿಕ್ಷಣ ಗಳಿಸಿದ್ದರು. ಸುಮಾರು 30 ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಹಲವಾರು ಪ್ರಕಾರದ ಸಾಹಿತ್ಯ ರಚಿಸಿದ್ದ ಅವರಿಗೆ ಹತ್ತಾರು ಪ್ರತಿಷ್ಠಿತ ಪ್ರಶಸ್ತಿ ಲಭಿಸಿತ್ತು.

 

Home add -Advt

Related Articles

Back to top button