Kannada NewsKarnataka NewsLatest

*9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಕ್ಲೀನರ್ ಬಂಧನ*

ಪ್ರಗತಿವಾಹಿನಿ ಸುದ್ದಿ: 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಖಾಸಗಿ ಬಸ್ ಕ್ಲೀನರ್ ಅತ್ಯಾಚಾರವೆಸಗಿರುವ ಪ್ರಕರಣ ಬೆಂಗಳೂರಿನ ನೆಲಮಂಗಲದಲ್ಲಿ ಬೆಳಕಿಗೆ ಬಂದಿದೆ.

ವಾರದ ಹಿಂದೆ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಕಂಗಾಲಾದ ಪೊಲೀಸರು ದಾಬಸ್ ಪೇಟೆ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರು. ಮೊಬೈಲ್ ಲೊಕೇಷನ್ ಆಧಾರದ ಮೇಲೆ ಹುಡುಕಿದ ಪೊಲೀಸರು ಬೆಂಗಳೂರಿನ ಯಲಹಂಕ ಬಳಿ ಬಾಡಿಗೆ ಮನೆಯಲ್ಲಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದರು.

Home add -Advt

ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ಬಸ್ ಕ್ಲೀನರ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾಗಿ ತಿಳಿದುಬಂದಿದೆ. ದೊಡ್ಡಬಳ್ಳಾಪುರ ಮೂಲದ ಆರೋಪಿ ಆನಂದ್ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿನಿ ಖಾಸಗಿ ಬಸ್ ನಲ್ಲಿ ದಾಬಸ್ ಪೇಟೆಯಿಂದ ತ್ಯಾಮಗೊಂಡ್ಲುಗೆ ಶಾಲೆಗೆ ಹೋಗುತ್ತಿದ್ದಳು. ಆನಂದ್ ಅದೇ ಬಸ್ ನ ಕ್ಲೀನರ್ ಅಗಿದ್ದ. ಇದೀಗ ವಿದ್ಯಾರ್ಥಿನಿ ಮೇಲೆ ನೀಚ ಕೃತ್ಯವೆಸಗಿದ್ದಾನೆ.

ಆರೋಪಿ ಆನಂದ್ ವಿರುದ್ಧ 2021ರಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿತ್ತು. ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದವನು ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಇದೀಗ ಮತ್ತದೇ ಕೃತ್ಯವೆಸಗಿದ್ದಾನೆ.

Related Articles

Back to top button