Kannada NewsKarnataka NewsLatest

*ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್; ದಕ್ಷಿಣ ಯಾತ್ರಾ ಯೋಜನೆ ಆರಂಭ; ಸಬ್ಸಿಡಿ ದರದಲ್ಲಿ ಟಿಕೆಟ್ ಬುಕಿಂಗ್ ಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ತೆರಳುವ ರಾಜ್ಯದ ಯತರಾರ್ಥಿಗಳಿಗೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ದಕ್ಷಿಣ ಯಾತ್ರಾ ಯೋಜನೆ ಆರಂಭಿಸಿದ್ದು, ವಾಗಿದ್ದು, ಆನ್ ಲೈನ್ ನಲ್ಲಿ ಸಬ್ಸಿಡಿ ದರದಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಿದೆ.

ಆಸಕ್ತ ಯಾತ್ರಾರ್ಥಿಕರು IRTC ರೈಲ್ವೆ ಆಪ್ ಮೂಲಕ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಮೊದಲ ಹಂತದಲ್ಲಿ ಎರಡು ರೈಲುಗಳಲ್ಲಿ ದಕ್ಷಿಣ ಯಾತ್ರೆ ನಡೆಯಲಿದೆ. ಜನವರಿ 18ರಂದು ದಕ್ಷಿಣ ಯಾತ್ರೆ ಮೊದಲ ರೈಲು ಹೊರಡಲಿದೆ. ಜನವರಿ 30ರಂದು ಎರಡನೇ ರೈಲು ಹೊರಡಲಿದೆ.

ಯಾತ್ರಿಕರು ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ತುಮಕೂರು, ಬೀರೂರು, ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಗಳ ಮೂಲಕ ರೈಲು ಹತ್ತಬಹುದಾಗಿದೆ.

ಒಟ್ಟು ಆರು ದಿನಗಲ ಕಾಲ ಯಾತ್ರೆ ಇರಲಿದ್ದು, ಈ ಯಾತ್ರೆಗೆ 15,000 ರೂಪಾಯಿ ಟಿಕೆಟ್ ವೆಚ್ಚ ತಗುಲುತ್ತದೆ. ರಾಜ್ಯ ಸರ್ಕಾರ 5,000 ರೂಪಾಯಿ ಸಬ್ಸಿಡಿ ನೀಡುತ್ತಿರುವುದರಿಂದ ಯಾತ್ರಿಕರು 10,000 ರೂಪಾಯಿ ಮಾತ್ರ ಪಾವತಿಸಬೇಕು. ಈ ಯೋಜನೆಯಡಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಾಗಿರುವ ರಾಮೇಶ್ವರಂ, ಕನ್ಯಾಕುಮಾರಿ, ಮದುರೈ ಹಾಗೂ ತಿರುವನಂತಪುರಂನಲ್ಲಿರುವ ಹಲವು ತೀರ್ಥ ಕ್ಷೇತ್ರಗಳನ್ನು ನೋಡಬಹುದು.

Related Articles

Back to top button