ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಎಸ್ಎಸ್ಎಲ್ ಸಿ ಮರುಮೌಲ್ಯಮಾಪದಲ್ಲಿ ರಾಜ್ಯಕ್ಕೇ 2ನೇ ಸ್ಥಾನ ಪಡೆದಿರುವ ಬೆಳಗಾವಿಯ ರೋಶನಿ ತೇಜಸ್ವಿ ಇಲ್ಲಿಯ ಕರಿಯರ್ ಎಕ್ಸೆಲ್ ನಲ್ಲಿ ಫೌಂಡೇಶನ್ ಕೋರ್ಸ್ ಮಾಡಿದ್ದಳು.
ಕರಿಯರ್ ಎಕ್ಸೆಲ್ ನಿರ್ದೇಶಕ ವಿನೋದ ದೇಶಪಾಂಡೆ ಈ ಸಂಬಂಧ ಪ್ರಗತಿವಾಹಿನಿ ಜೊತೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ರೋಶನಿ ತಂದೆ ಡಾ.ಟಿ.ಎಸ್.ತೇಜಸ್ವಿ ಮತ್ತು ತಾಯಿ ಡಾ.ರಾಜಿ ತೇಜಸ್ವಿ ಇಬ್ಬರೂ ತಜ್ಞ ವೈದ್ಯರು. ಆದರೂ ಮಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ರೋಶನಿಗೆ ಮೊದಲು 625ಕ್ಕೆ 622 ಅಂಕ ಬಂದಿತ್ತು. ಆಗ ರಾಜ್ಯಕ್ಕೆ 4ನೇ ರ್ಯಾಂಕ್ ಮತ್ತು ಬೆಳಗಾವಿ ಜಿಲ್ಲೆಗೆ ಮೊದಲ ರ್ಯಾಂಕ್ ಇತ್ತು.
ಆದರೆ ತನಗೆ ಬಂದಿರುವ ಅಂಕದಿಂದ ತೃಪ್ತಳಾಗದ ರೋಶನಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಳು. ಇದೀಗ 625ಕ್ಕೆ 624 ಅಂಕ ಬಂದಿದ್ದು, ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾಳೆ.
ಬೆಳಗಾವಿಯ ಆರ್ ಪಿಡಿ ಕ್ರಾಸ್ ಸಮೀಪ ರಿಲಾಯನ್ಸ್ ಪೆಟ್ರೋಲ್ ಪಂಪ್ ಬಳಿ ಇರುವ ಕರಿಯರ್ ಎಕ್ಸೆಲ್ ನಲ್ಲಿ ತನಗೆ ದೊರೆತ ಉತ್ತಮ ಮಾರ್ಗದರ್ಶನದ ಹಿನ್ನೆಲೆಯಲ್ಲಿ ರೋಶನಿ ತನ್ನ ತಂದೆಯೊಂದಿಗೆ ಕರಿಯರ್ ಎಕ್ಸೆಲ್ ಸೆಂಟರ್ ಗೆ ಆಗಮಿಸಿ ನಿರ್ದೇಶಕ ವಿನೋದ ದೇಶಪಾಂಡೆ ಅವರೊಂದಿಗೆ ಸಂತಸ ಹಂಚಿಕೊಂಡರು.
ಕರಿಯರ್ ಎಕ್ಸೆಲ್ ನಲ್ಲಿ ಅತ್ಯಂತ ನುರಿತ ಉಪನ್ಯಾಸಕರಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಮಾರ್ಗದರ್ಶನ ನೀಡಲಾಗುತ್ತಿದೆ. ಕೇವಲ ಎಸ್ಎಸ್ಎಲ್ ಸಿಯಲ್ಲದೆ ಐಐಐಟಿ, ಐಎಸ್, ಐಪಿಎಸ್ ನಂತಹ ಉನ್ನತ ಶಿಕ್ಷಣಕ್ಕೆ ಬೇಕಾದ ಮಾರ್ಗದರ್ಶನ ಇಲ್ಲಿ ಸಿಗುತ್ತದೆ ಎಂದು ದೇಶಪಾಂಡೆ ಹೇಳಿದರು.
ವಿದ್ಯಾರ್ಥಿಯ ಸಾಧನೆಗೆ ಅವರು ಅಭಿನಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ