
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ನಗರದಲ್ಲಿ ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಕಾರುಗಳ ಗಾಜು ಒಡೆಯುತ್ತಿದ್ದ ನಾಲ್ವರು ಕಿಡಿಗೇಡಿಗಳನ್ನು ಖಡೇಬಜಾರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ರಾಮಲಿಂಗಖಿಂಡಗಲ್ಲಿಯ ಶ್ರೀಧರ ಪದ್ಮಣ್ಣವರ್, ಮುಜಾವರಗಲ್ಲಿಯ ಅನ್ವರಅಲಿ ಬಾಬು ಮಸ್ಕೆವಾಲೆ ನೀಡಿದ ದೂರಿನ್ವಯ ತನಿಖೆ ಮಾಡಿದ ಪೊಲೀಸರು ಶಾಂತಿ ಕದಡುತ್ತಿದ್ದ ರಾಮಚಂದ್ರ ಪ್ರಮೋದ ಮುಚ್ಚಂಡಿ( 19), ಅಭಿಜೀತ ಗಜಾನನ ನಾವಗೇಕರ (26 ) ಕಿಸನ್ ನಾರಾಯನ ಸಾಂಗಡೆ(26) ಸ್ವಪ್ನಿಲ್ ಚಂದ್ರಕಾಂತ ದೇಸೂರಕರ(22) ಎನ್ನುವವರನ್ನು ಬಂಧಿಸಿದ್ದಾರೆ.
——————————————————————————————————————





