ಪ್ರಗತಿವಾಹಿನಿ ಸುದ್ದಿ, ಖಾನಾಪುರ –
ಖಾನಾಪುರ ತಾಲೂಕಿನ ಗೋಲಿಹಳ್ಳಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ ತಾವರಗಟ್ಟಿ ಗ್ರಾಮದ ಸಮೀಪ ಉಡಗಳನ್ನು ಬೇಟೆಯಾಡುತ್ತಿದ್ದ ಆರೋಪಿಯನ್ನು ಉಡದ ಸಮೇತ ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಗೋಲಿಹಳ್ಳಿ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗೋದೊಳ್ಳಿ ಉಪವಲಯ ಅರಣ್ಯ ಅಧಿಕಾರಿಯ ಕಾರ್ಯ ಕ್ಷೇತ್ರದ ತಾವರಗಟ್ಟಿ ಗ್ರಾಮದ ಸಮೀಪದಲ್ಲಿ ಅಕ್ರಮವಾಗಿ ಉಡಾ ಬೇಟೆಯಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತ ತಾವರಗಟ್ಟಿ ಗ್ರಾಮದ ಆರೋಪಿ ಮೈಕಲ್ ಮರೆಪ್ಪ ಅಂಬೇವಾಡ್ಕರ್(34) ಈತನನ್ನನು ಉಡದ ಸಮೇತ ಬಂಧಿಸುವಲ್ಲಿ ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿಯಾಗಿದೆ.
ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಅಂತೋನಿ ಮರೆಯಪ್ಪನವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರುದ್ರಪ್ಪ ಕಬಾಡಗಿ, ವಲಯ ಅರಣ್ಯ ಅಧಿಕಾರಿಗಳಾದ ವಾಣಿಶ್ರೀ ಹೆಗಡೆ ಅವರ ನೇತೃತ್ವದಲ್ಲಿ, ಬುಧೊಳ್ಳಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿಗಳಾದ ಕುಮಾರಸ್ವಾಮಿ ಹಿರೇಮಠ ಹಾಗೂ ಸಿಬ್ಬಂದಿಗಳಾದ ಅನಿಲ ಸಾಳುಂಕೆ, ಉಪಾ ವಲಯ ಅರಣ್ಯ ರಕ್ಷಕರಾದ ರಾಜು ಹುಬ್ಬಳ್ಳಿ, ಮಂಜುನಾಥ್ ಗೌಡ್ರ, ಅಜಯ್ ಭಾಸ್ಕರಿ, ಅರಣ್ಯ ವೀಕ್ಷಕರಾದ ಅಶೋಕ್, ಸೋಮನಿಂಗ, ಪ್ರಕಾಶ ಎಲ್ಲರೂ ಸೇರಿಕೊಂಡು ಪ್ರಕಾರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
https://pragati.taskdun.com/belagavi-news/opening-of-salu-marada-thimmakka-gardens/
https://pragati.taskdun.com/latest/a-clue-to-the-yet-undiscovered-leopard-not-caught-on-camera/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ